

ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

ದೀಪ ಪ್ರಜ್ವಲನೆಗೊಳಿಸಿ ಬಳಿಕ ಮಾತನಾಡಿದ ಕುಶಾಲಪ್ಪ ಗೌಡ ಪೂವಾಜೆ ರೈತರ ಸಂಕಷ್ಟದ ವಿಷಯಕ್ಕೆ ಸ್ಪಂದಿಸಿ, ಈ ವರ್ಷ ಮಳೆ ವಿಪರೀತವಾಗಿ ಸುರಿದು ಬೆಳೆಗಳಲ್ಲಿ ಕೊಳೆರೋಗ ಬಂದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರವು ಬೆಳೆ ವಿಮೆ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಿ ರೈತರ ಹಿತ ಕಾಪಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಹಾಗೂ ಸಂಘವು ವಾರ್ಷಿಕ ₹233.13 ಕೋಟಿ ರೂ. ವ್ಯವಹಾರ ನಡೆಸಿ, ₹1.20 ಕೋಟಿ ರೂ. ಲಾಭ ಗಳಿಸಿದೆ. ಈ ಬಾರಿ ಸದಸ್ಯರಿಗೆ 15% ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು. ಸಂಘದ ಠೇವಣಿ ₹36 ಕೋಟಿಗಿಂತ ಹೆಚ್ಚು ಇದ್ದು, ₹42 ಕೋಟಿ ಸಾಲದಲ್ಲಿ ಶೇ.99ರಷ್ಟು ವಸೂಲಾತಿ ಮಾಡಿರುವುದಾಗಿ ತಿಳಿಸಿದರು. ಈ ಸಾಧನೆಗಾಗಿ ಡಿಸಿಸಿ ಬ್ಯಾಂಕ್ನ ವಾರ್ಷಿಕ ಮಹಾಸಭೆಯಲ್ಲಿ ಸಂಘಕ್ಕೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಿದ್ದಾರೆ ಎಂದರು. ಸಂಘದ ನೌಕರರ ಪ್ರಾಮಾಣಿಕ ಸೇವೆ, ಸದಸ್ಯರ ಬೆಂಬಲವೇ ಈ ಸಾಧನೆಗೆ ಕಾರಣ ಎಂದು ಅವರು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿಶಾಂತ್ ಬಿ.ವಿ, ಪ್ರಾಂಜಲ್ ಗೌಡ, ಶನು ಶಲ್ಫಿ, ಸ್ಫೂರ್ತಿ ಬಿ.ಎ, ಕೃತಿ ಕೆ, ನಿಶಾಂತ್, ಸುಜಯ್, ದೃತಿ, ನಿರೀಕ್ಷಾ, ಪ್ರಾಂಜಲಿ, ಪೂಜಾ ದೇವಸ್ಯ, ಮಾನ್ಯಶ್ರೀ, ಭವ್ಯಶ್ರೀ, ಭರತೇಶ್, ಪೂಜಶ್ರೀ ಹಾರಪುತ್ಯೆ ಇವರಿಗೆ ಗೌರವ ನೀಡಲಾಯಿತು.
ಹಾಗೇ ಸಂಘದ ವ್ಯಾಪ್ತಿಯಲ್ಲಿಯೇ ಅತೀ ಹೆಚ್ಚು ಗೊಬ್ಬರ ಖರೀದಿಸಿದ ಮಾಯಿಲಪ್ಪ ಗೌಡ ಬಟ್ಟಾಡಿ, ರಾಘವ ಕೆ. ಕೊಲ್ಲಾಜೆ ಹಾಗೂ ಕ್ಯಾಂಪ್ಕೋ ಮೂಲಕ ಅಡಿಕೆ ಮಾರಾಟದಲ್ಲಿ ಸಾಧನೆ ಮಾಡಿದ ಕೃಷ್ಣ ಭಟ್ ಹಿತ್ತಿಲು ಇವರನ್ನು ಗೌರವಿಸಲಾಯಿತು.
ಭತ್ತದ ಬೆಳೆ ಬೆಳೆದು ಸಾಧನೆ ಮಾಡಿದ ಕೊಕ್ಕಡ ಮತ್ತು ಪಟ್ರಮೆ ಗ್ರಾಮದ ರೈತರಾದ ಅಣ್ಣು ಗೌಡ ಹೊಳೆಬದಿ, ವಿಶ್ವನಾಥ ಕಕ್ಕುದೋಳಿ, ಆನಂದ ಕಕ್ಕುದೋಳಿ, ಕಿಟ್ಟ ಎಂ.ಕೆ ಕುರ್ಲೆ, ರಾಘವ ಕೊಲ್ಲಾಜೆ, ತಿಮ್ಮಪ್ಪ ಕುಳ್ಳಜಾಲು, ಜನಾರ್ಧನ ಶಬರಾಡಿ, ಸುಂದರ ಗೌಡ ಗಾಂತೋಟ್ಯ, ಹರೀಶ್ ಕೆಮನೋಡಿ, ಶೀನಪ್ಪ ಕೆಮನೋಡಿ, ಕೆಂಚಪ್ಪ ಹೊಳೆಬದಿ, ನೇಮಣ್ಣ ಹೊಳೆಬದಿ, ಯುವರಾಜ ಜೈನ್ ಉಳಿಯಬೀಡು, ದೇವಪಾಲ ಅಜ್ರಿ ಉಳಿಯಬೀಡು, ಕೊರಗಪ್ಪ ಗೌಡ ಅಪ್ರೂಡಿ, ಲಕ್ಷ್ಮಣ ಗೌಡ ಜಾಲು, ದೊಲ್ಲ ಗೌಡ ಜಾಲು, ರೇವತಿ ಕೋಡಿ ಮಜಲು, ದರ್ನಪ್ಪ ಗೌಡ ಗಾಂತೋಟ್ಯ ಇವರಿಗೂ ಸನ್ಮಾನ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ನಿರ್ದೇಶಕರಾದ ವಿಠಲ ಬಂಡಾರಿ, ಉದಯ ಕುಮಾರ್ ಎ., ಶ್ರೀನಾಥ್ ಬಿ., ಪದ್ಮನಾಭ ಗೌಡ ಕೆ., ಅಶ್ವಿನಿ ರವಿ ನಾಯ್ಕ್, ಪ್ರೇಮಾವತಿ ಸುನಿಲ್ ಕೆ., ರವಿಚಂದ್ರ ಪಿ., ವಿಶ್ವನಾಥ ಕಕ್ಕುದೋಲಿ, ಮುತ್ತಪ್ಪ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಕೆ. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಚೈತನ್ಯ ಪ್ರಾರ್ಥಿಸಿದರು, ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಿಸಿದರು, ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕೆ. ಮಂಡಿಸಿದರು.ಸುಂದರ ಗೌಡ ಕೆ. ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಶ್ರೀನಾಥ್ ವಂದಿಸಿದರು.






