

ನೆಲ್ಯಾಡಿ : ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜು ನಲ್ಲಿ ಜೀವನ ಕೌಶಲ್ಯ ಮತ್ತು ಸಾಮರ್ಥ್ಯ ವರ್ಧನೆ ತರಬೇತು ಕಾರ್ಯಾಗಾರವನ್ನು ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿಐ ಹಾಗೂ ಜೂನಿಯರ್ ಜೇಸಿವಿಂಗ್ ಹಾಗೂ ಎನ್ಎಸ್ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಯಿತು.
ಜೇಸಿಐ ರಾಷ್ಟ್ರೀಯ ತರಬೇತುದಾರ ವೇಣುಗೋಪಾಲ ಎಸ್.ಜೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ರೀತಿಯಲ್ಲಿ ಜೀವನದಲ್ಲಿ ಸಾಧನೆ ಮಾಡಲು ಬೇಕಾದ ಕೌಶಲ್ಯಗಳನ್ನು ಬೋಧಿಸಿ, ಸ್ಪೂರ್ತಿ ತುಂಬಿದರು.
ಕಾಲೇಜಿನ ಸಂಯೋಜಕ ಡಾ.ಸುರೇಶ್ ಅವರು ಉಪಸ್ಥಿತರಿದ್ದು ಈ ತರಬೇತಿಯ ಮಹತ್ವವನ್ನು ವಿವರಿಸಿ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುವಂತೆ ಹಾರೈಸಿದರು. ಕಾರ್ಯಕ್ರಮವು ಜೇಸಿಐ ವಾಣಿಯೊಂದಿಗೆ ಶುಭಾರಂಭಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ನೆಲ್ಯಾಡಿ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ವಹಿಸಿ ಸ್ವಾಗತಿಸಿದರು. ಅತಿಥಿಗಳನ್ನು ಜಯಾನಂದ ಬಂಟ್ರಿಯಾಲ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಡಾ.ಸೀತಾರಾಮ.ಪಿ ವಂದಿಸಿದರು.
ವೇದಿಕೆಯಲ್ಲಿ ಮಹಿಳಾ ಜೇಸಿ ಅಧ್ಯಕ್ಷೆ ಪ್ರವೀಣಿ ಸುಧಾಕರ ಶೆಟ್ಟಿ, ಜೇಸಿಐ ನೆಲ್ಯಾಡಿಯ ನಿಕಟಪೂರ್ವ ಅಧ್ಯಕ್ಷೆ ಸುಚಿತ್ರ ಜೆ. ಬಂಟ್ರಿಯಾಲ್, ಜೊತೆ ಕಾರ್ಯದರ್ಶಿ ಸುಪ್ರಿತಾ ರವಿಚಂದ್ರ ಹೊಸವೊಕ್ಲು, ಎನ್ಎಸ್ಎಸ್ ಯೋಜನಾಧಿಕಾರಿ ಶ್ರುತಿ, ಕಾರ್ಯಕ್ರಮದ ಯೋಜನಾ ನಿರ್ದೇಶಕ ವಿನ್ಯಾಸ್ ಬಂಟ್ರಿಯಾಲ್, ರವಿಚಂದ್ರ ಹೊಸವೊಕ್ಲು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿಗಳು, ನೆಲ್ಯಾಡಿ ಜೇಸಿಐ ಸದಸ್ಯರುಗಳು, ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು.






