ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಸೇವಾ ದರ ಪರಿಷ್ಕರಣೆ : ಎಂಟು ವರ್ಷಗಳ ಬಳಿಕ 8 ಸೇವೆಗಳ ದರ ಏರಿಕೆ – ಸರ್ಕಾರದ ಯಾವುದೇ ಪಾತ್ರವಿಲ್ಲ

ಶೇರ್ ಮಾಡಿ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಎಂಟು ವರ್ಷಗಳ ಬಳಿಕ ಸೇವಾ ದರಗಳಲ್ಲಿ ಅಲ್ಪ ಪ್ರಮಾಣದ ಪರಿಷ್ಕರಣೆ ಮಾಡಲಾಗಿದೆ. ಕ್ಷೇತ್ರದ ವ್ಯವಸ್ಥಾಪನ ಸಮಿತಿಯವರು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸಿದ 20.01.2024ರ ಸಭಾ ನಿರ್ಣಯದಂತೆ, ದೇವಸ್ಥಾನದ ಒಟ್ಟು 20 ಸೇವೆಗಳಲ್ಲಿ 8 ಸೇವೆಗಳ ದರವನ್ನು ಸಣ್ಣ ಪ್ರಮಾಣದಲ್ಲಿ ಪರಿಷ್ಕರಿಸಲಾಗಿದೆ.

ಪರಿಷ್ಕೃತ ದರಗಳ ಪ್ರಕಾರ ಅವಲಕ್ಕಿ ಪಂಚಕಜ್ಜಾಯ ಸೇವೆ ₹70ರಿಂದ ₹80ಕ್ಕೆ, ಕಡ್ಲೆ ಪಂಚಕಜ್ಜಾಯ ₹20ರಿಂದ ₹30ಕ್ಕೆ, ಅಪ್ಪ ಪ್ರಸಾದ ₹30ರಿಂದ ₹40ಕ್ಕೆ, ಲಾಡು ಪ್ರಸಾದ ₹20ರಿಂದ ₹30ಕ್ಕೆ ಏರಿಕೆಯಾಗಿದೆ. ಘನ ವಾಹನ ಪೂಜೆ ₹75ರಿಂದ ₹100ಕ್ಕೆ, ಲಘು ವಾಹನ ಪೂಜೆ ₹100ರಿಂದ ₹200ಕ್ಕೆ, ಅಷ್ಟೋತ್ತರ ಅರ್ಚನೆ ₹40ರಿಂದ ₹50ಕ್ಕೆ ಹೆಚ್ಚಿಸಲಾಗಿದೆ.

ಕ್ಷೇತ್ರದ ಅಧ್ಯಕ್ಷರು ಸುಬ್ರಹ್ಮಣ್ಯ ಶಬರಾಯ ಕೆ ಅವರು ನೀಡಿದ ಮಾಹಿತಿಯ ಪ್ರಕಾರ, ಈ ಪರಿಷ್ಕರಣೆ ಮಾಡುವಾಗ ಆಗಮ ಪಂಡಿತರು ದೇವಳಕ್ಕೆ ಭೇಟಿ ನೀಡಿ ಸೇವಾ ದರ ಪಟ್ಟಿಯನ್ನು ಪರಿಶೀಲಿಸಿ ಅಗತ್ಯ ಬದಲಾವಣೆಗಳನ್ನು ಶಿಫಾರಸು ಮಾಡಿದ್ದರು. ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ, ಅನಿವಾರ್ಯವಾಗಿ ಅಲ್ಪ ಪ್ರಮಾಣದ ದರ ಪರಿಷ್ಕರಣೆ ಮಾಡಲಾಗಿದೆ.

ಅವರು ಸ್ಪಷ್ಟಪಡಿಸಿ, ಈ ಪರಿಷ್ಕರಣೆಯಲ್ಲಿ ಸರ್ಕಾರದ ಯಾವುದೇ ರೀತಿಯ ಪಾತ್ರವಿಲ್ಲ. ಸಂಪೂರ್ಣವಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಭಾ ನಿರ್ಣಯದ ಪ್ರಕಾರವೇ ದರ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದರು.

  •  

Leave a Reply

error: Content is protected !!