

ಕೊಕ್ಕಡ: ಕೊಕ್ಕಡ ಗ್ರಾಮದ ಬೋಳದಬೈಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸಂಗೀತಾ (40) ಅವರು ಸೆ.20ರಂದು ಅಸೌಖ್ಯದಿಂದ ನಿಧನರಾದರು.
ಬೋಳದಬೈಲು ಅಂಗನವಾಡಿಯಲ್ಲಿ ವೃತ್ತಿಜೀವನ ಆರಂಭಿಸಿದ ಅವರು ಕಳೆದ ಐದು ವರ್ಷಗಳಿಂದ ಕಾರ್ಯಕರ್ತೆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಾರ್ಯದಕ್ಷತೆ ಮತ್ತು ಬದ್ಧತೆಯಿಂದ ತಮ್ಮ ಸೇವೆಯನ್ನು ನೀಡಿದ ಅವರು ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ಅವರ ಪತಿ ಉಮೇಶ್ ಅವರು ಎಂಟು ವರ್ಷಗಳ ಹಿಂದೆ ನಿಧನರಾಗಿದ್ದರು. ಮರುವಂತಿಲ ಮೂಲದವರಾಗಿದ್ದ ಅವರು ಪ್ರಸ್ತುತ ಕಕ್ಕಿಂಜೆಯಲ್ಲಿ ವಾಸವಾಗಿದ್ದರು. ಮೃತರಿಗೆ ಓರ್ವ ಪುತ್ರಿ ಪೂಜಾ ಇದ್ದಾರೆ.






