ಕೌಕ್ರಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ವಾರ್ಷಿಕ ಸಭೆ| ರೂ. 1.13 ಲಕ್ಷ ನಿವ್ವಳ ಲಾಭ| ಶೇ.9.5% ಡಿವಿಡೆಂಡ್|ಪ್ರತಿ ಲೀಟರ್ ಹಾಲಿಗೆ 0.30 ಪೈಸೆ ಬೋನಸ್

ಶೇರ್ ಮಾಡಿ

ಕೊಕ್ಕಡ: ಕೌಕ್ರಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ 2024-25ನೇ ಸಾಲಿನ ವಾರ್ಷಿಕ ಸಭೆಯು ಕೌಕ್ರಾಡಿ ಸಂತ ಜೋನರ ಶಾಲೆಯಲ್ಲಿ ಸೆ. 22ರಂದು ಅದ್ದೂರಿಯಾಗಿ ನೆರವೇರಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರೆಫಾಯಿಲ್ ಸ್ಟ್ರೆಲ್ಲಾ ವಹಿಸಿಕೊಂಡು ಮಾತನಾಡಿದರು. ಸಂಘದಲ್ಲಿ ಒಟ್ಟು 110 ಸದಸ್ಯರಿದ್ದು, ರೂ. 43,500 ಪಾಲು ಬಂಡವಾಳವಿದೆ ಎಂದು ತಿಳಿಸಿದರು. ಕಳೆದ ಸಾಲಿನಲ್ಲಿ ಸಂಘವು ಒಟ್ಟು 1,41,096.40 ಲೀಟರ್ ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ ಮಾರಾಟ ಮಾಡಿದ್ದು, 6,712.6 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಜೊತೆಗೆ ಪಶು ಆಹಾರ, ಲವಣ ಮಿಶ್ರಣ, ಸಮೃದ್ಧಿ ಮಾರಾಟದಿಂದ ಸಂಘದ ಒಟ್ಟು ಆದಾಯ ರೂ. 5,04,337.44 ಆಗಿದೆ.

ಎಲ್ಲಾ ಖರ್ಚುಗಳನ್ನು ಕಡಿತಗೊಳಿಸಿದ ಬಳಿಕ ಸಂಘವು ಈ ವರ್ಷ ರೂ. 1,13,065.26 ನಿವ್ವಳ ಲಾಭ ಗಳಿಸಿದೆ. ಇದರ ಲಾಭಾಂಶವನ್ನು ಸದಸ್ಯರಿಗೆ ಹಂಚುವ ಉದ್ದೇಶದಿಂದ 9.5% ಡಿವಿಡೆಂಡ್ ಮತ್ತು ಪ್ರತಿ ಲೀಟರ್ ಹಾಲಿಗೆ 0.30 ಪೈಸೆ ಬೋನಸ್ ನೀಡಲಾಗುವುದು ಎಂದು ಅವರು ಘೋಷಿಸಿದರು.

ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಪ್ರಸಾದ್ ಕಾಮತ್ ಮಾತನಾಡಿ ಸಂಘಕ್ಕೆ ಹೆಚ್ಚಿನ ಲಾಭ ಬರಬೇಕಾದರೆ ಸದಸ್ಯರು ಪೂರೈಸುವ ಹಾಲು ಗುಣಮಟ್ಟದಿಂದ ಕೂಡಿರಬೇಕು. ಪಶುಗಳಿಗೆ ಬರುವ ಕಾಯಿಲೆ, ತಡೆಗಟ್ಟುವ ಕ್ರಮ, ಹಾಲು ಹೆಚ್ಚಿಸುವ ವಿಧಾನಗಳನ್ನು ಅನುಸರಿಸುವುದು ಅತ್ಯವಶ್ಯಕ” ಎಂದು ಸಲಹೆ ನೀಡಿದರು. ನಂದಿನಿ ಪಶು ಆಹಾರವು ಸಮತೋಲನ ಆಹಾರವಾಗಿದ್ದು ಪಶುಗಳ ಆರೋಗ್ಯ ಮತ್ತು ಹಾಲಿನ ಉತ್ಪಾದನೆಗೆ ಉತ್ತಮ. ಹೀಗಾಗಿ ಇದನ್ನು ಉಪಯೋಗಿಸಬೇಕು ಎಂದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಸೇಸಪ್ಪ ಗೌಡ, ನಿರ್ದೇಶಕರು ರೈಮಾಂಡ್ ಗೆಲ್ಬಾವೊ, ಜಿ. ನಾರಾಯಣಗೌಡ, ಸೇಸಪ್ಪ ಗೌಡ ಬಿ, ಎಡ್ವರ್ಡ್ ಪಿಂಟೊ, ಯಶೋದ, ಜ್ಯೋತಿ, ವನಿತಾ ಮೊಂತೇರೊ, ಗುಲಾಬಿ, ಜಿನ್ನಮ್ಮ, ಬಾಬಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಫೆಲ್ಸಿ ವೇಗಸ್ ವಾರ್ಷಿಕ ವರದಿ ಮಂಡಿಸಿದರು. ವನಿತಾ, ಗುಲಾಬಿ, ಜಿನ್ನಮ್ಮ ಪ್ರಾರ್ಥನೆ ನಡೆಸಿದರು. ಅಜ್ಜಿ ನಾರಾಯಣಗೌಡ ಸ್ವಾಗತಿಸಿದರು. ಸೇಸಪ್ಪ ಗೌಡ ಬಿ ವಂದಿಸಿದರು. ಹಾಲು ಪರೀಕ್ಷಾಕ್ಷಿ ಸರಿತಾ ಸಹಕರಿಸಿದರು.

ಸನ್ಮಾನ:
ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸಿದ ಪ್ರಸನ್ನಕುಮಾರ್, ರಾಜು ಗೌಡ ಸೇಸಪ್ಪ ಗೌಡ, ಎಲ್ಸಮ್ಮ ವರ್ಗೀಸ್, ಶೋಭಾ, ಬಿ. ರಘು, ಸವಿತಾ, ಸೆಲೀನಾ, ನಾರಾಯಣಗೌಡ ಜಿ, ಲಕ್ಷ್ಮಿ, ವಸಂತ, ಶ್ರೀಮತಿ ಹಾಗೂ 13 ನಿರ್ದೇಶಕರುಗಳಿಗೆ ಹಾಗೂ ಸಂಘಕ್ಕೆ ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.

  •  

Leave a Reply

error: Content is protected !!