ವಿದ್ಯುತ್ ಕಂಬವೇ ಅಂಗಡಿಯ ಸ್ಟ್ಯಾಂಡ್? — ನೆಲ್ಯಾಡಿಯಲ್ಲಿ ವ್ಯಾಪಾರಿಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ರಾಜ್ಯಬೀದಿಯ ಪಾದಚಾರಿ ಮಾರ್ಗದ ಬದಿಯಲ್ಲಿ ಅಳವಡಿಸಿರುವ ಹೈಟೆನ್ಶನ್ ವಿದ್ಯುತ್ ಕಂಬವನ್ನೇ ಬಟ್ಟೆ ಅಂಗಡಿಯ ಹ್ಯಾಂಗರ್ ಆಗಿ ವ್ಯಾಪಾರಿ ಬಳಸಿರುವ ಘಟನೆ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದೆ.

ಜನರ ಗಮನ ಸೆಳೆಯಲು ತನ್ನ ಮಳಿಗೆಯ ಬಟ್ಟೆಗಳನ್ನು ನೇರವಾಗಿ ವಿದ್ಯುತ್ ಕಂಬಕ್ಕೆ ನೇತುಹಾಕಿರುವುದು ಕಂಡುಬಂದಿದ್ದು, ಯಾವಾಗ ಬೇಕಾದರೂ ದುರಂತ ಸಂಭವಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಏನಾದರೂ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಬಟ್ಟೆಗಳು ಕಂಬಕ್ಕೆ ತಾಗಿದರೆ ಹೊತ್ತಿ ಉರಿಯುವ ಅಪಾಯವಿದ್ದು, ದಾರಿಹೋಕರ ಜೀವಕ್ಕೂ ಗಂಭೀರ ಅಪಾಯ ಎದುರಾಗುವ ಸಾಧ್ಯತೆ ತೀವ್ರವಾಗಿದೆ.

ವಿದ್ಯುತ್ ಕಂಬಗಳಲ್ಲಿ ಯಾವುದೇ ವಸ್ತುಗಳನ್ನು ನೇತು ಹಾಕುವುದು ಕಾನೂನುಬಾಹಿರ. ಆದರೆ ನಿರ್ಲಕ್ಷ್ಯದಿಂದ ಕಂಬವನ್ನೇ ಮಳಿಗೆಯ ಪ್ರದರ್ಶನ ಸ್ಥಳವನ್ನಾಗಿ ಮಾರ್ಪಡಿಸಿರುವ ವ್ಯಾಪಾರಿಯ ಅಪರಾಧ ಕ್ರಮವನ್ನು ಸಾರ್ವಜನಿಕರು ಖಂಡಿಸಿದ್ದಾರೆ.

ಇಂತಹ ಅಕ್ರಮ ಹಾಗೂ ಅಪಾಯಕಾರಿ ನಡೆಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ. ಸ್ಥಳೀಯ ಆಡಳಿತ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಯಾವಾಗಲಾದರೂ ಭೀಕರ ದುರಂತ ಸಂಭವಿಸುವುದು ಖಚಿತ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

  •  

Leave a Reply

error: Content is protected !!