ನೇಸರ ಮಾ.14: ಜೇಸಿಐ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿಐ. ಪಿಪಿಪಿ. ಕೆ.ಕೆ ಪೊನ್ನರಾಜ್ ರವರು ಮಾ.11ರಂದು ಜೇಸಿಐ ಬಂಟ್ವಾಳ ಘಟಕಕ್ಕೆ ಅಧಿಕೃತ ಬೇಟಿ ನೀಡಿದರು. ಭಾರತೀಯ ಜೇಸಿಯ ಇಂಪ್ಯಾಕ್ಟ್ 2030 ಕಾರ್ಯಕ್ರಮದ ಅಡಿಯಲ್ಲಿ ಅಜ್ಜಿಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆಗೆ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೇಸಿಐ.ಸೆನೆಟರ್.ರಾಯನ್ ಉದಯ ಕ್ರಾಸ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮ ನಿರ್ದೇಶಕ ಜೇಸಿ.ಡಾ.ಬಾಲಕೃಷ್ಣ. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಮಾಂಬಾಡಿ ಹಾಗೂ ವಲಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಜೇಸಿಐ ಬಂಟ್ವಾಳದ ನಿಕಟ ಪೂರ್ವಧ್ಯಾಕ್ಷ ಜೇಸಿ.ಉಮೇಶ್ ಮೂಲ್ಯ, ಎಲ್ಲಾ ಪೂರ್ವಧ್ಯಾಕ್ಷರು, ಸದಸ್ಯರು, ಲೇಡಿ ಜೇಸಿಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಯಶಸ್ವಿಗಳಿಸುವಲ್ಲಿ ಸಹಕರಿಸಿದರು. ಜೇಸಿಐ ಬಂಟ್ವಾಳದ ಅಧ್ಯಕ್ಷ ಜೇಸಿ.ರೋಶನ್.ರೈ ಸ್ವಾಗತಿಸಿ. ಶಾಲಾ ಶಿಕ್ಷಕಿ ಶ್ರೀಮತಿ ಸುಶೀಲಾ ವಂದಿಸಿದರು.
—ಜಾಹೀರಾತು—