ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಭಜಕರ ಸಭೆ: ಹೊಸ ಆಡಳಿತ ಮಂಡಳಿ ರಚನೆ

ಶೇರ್ ಮಾಡಿ

ಬೆಳ್ತಂಗಡಿ: ಮುಂಡಾಜೆ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಭಜಕರ ಸಭೆ ಭಾನುವಾರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಗೋಖಲೆ ಅಧ್ಯಕ್ಷತೆ ವಹಿಸಿದ್ದರು. ಅರೆಕಲ್ಲು ರಾಮಚಂದ್ರ ಭಟ್, ಅನಂತ ಭಟ್ ಮಚ್ಚಿಮಲೆ, ರವಿಕಿರಣ ಮರಾಠೆ ಮುಂತಾದವರು ಮಾತನಾಡಿ ದೇವಸ್ಥಾನದ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ವಿವಿಧ ವಿಷಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಕಳೆದ ಅವಧಿಯ ಆಡಳಿತ ಮಂಡಳಿಯ ಸದಸ್ಯರೂ ಸಭೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಬಾಬು ಪೂಜಾರಿ ನಿರೂಪಿಸಿದರು. ಅಡೂರು ವೆಂಕಟ್ರಾಯ ಸ್ವಾಗತಿಸಿದರು.

ಸಭೆಯ ಪ್ರಮುಖ ಭಾಗವಾಗಿ ಮುಂದಿನ ಐದು ವರ್ಷಗಳ ಅವಧಿಗೆ ದೇವಸ್ಥಾನದ ನೂತನ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಕಜೆ ವೆಂಕಟೇಶ್ವರ ಭಟ್, ಶಶಿಧರ್ ಠೋಸರ್, ಅರೆಕ್ಕಲ್ ರಾಮಚಂದ್ರ ಭಟ್, ವಾಸುದೇವ ಗೋಖಲೆ, ಅಶ್ವಿನಿ ಎ. ಹೆಬ್ಬಾರ್, ವಿಜಯ ಕುಮಾರ್ ರೈ, ಉಷಾ ಫಡಕೆ, ಚಂದ್ರಕಾಂತ ಪ್ರಭು, ಚೆನ್ನಕೇಶವ ನಾಯ್ಕ, ಶೀನಪ್ಪ ಗೌಡ ಹಾಗೂ ಶಶಾಂಕ ಮರಾಠೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಖಾಯಂ ಗೌರವಾಧ್ಯಕ್ಷರಾಗಿ ಜಗದೀಶ ಫಡಕೆ ಮುಂದುವರಿಸಲ್ಪಟ್ಟಿದ್ದಾರೆ. ವಿಶೇಷ ಆಹ್ವಾನಿತರಾಗಿ ಬಾಬು ಪೂಜಾರಿ ಮತ್ತು ಋತುಪರ್ಣ ಡೋಂಗ್ರೆ ಆಯ್ಕೆಯಾದರು.

  •  

Leave a Reply

error: Content is protected !!