

ನೆಲ್ಯಾಡಿ: ಕಡಬ ತಾಲೂಕು ಭೂ ನ್ಯಾಯ ಮಂಡಳಿಗೆ ನೆಲ್ಯಾಡಿಯ ನೋಟರಿ ವಕೀಲ ಇಸ್ಮಾಯಿಲ್ ನೆಲ್ಯಾಡಿ ಹಾಗೂ ಅಬ್ರಹಾಂ ಕೆ.ಪಿ ನೆಲ್ಯಾಡಿ ಅವರನ್ನು ನಾಮನಿರ್ದೇಶನಗೊಳಿಸಿ ಕಂದಾಯ ಇಲಾಖಾ(ಭೂ ಸುಧಾರಣೆ) ಅಧೀನ ಕಾರ್ಯದರ್ಶಿಯವರು ಆದೇಶ ಮಾಡಿದ್ದಾರೆ.
ಅಬ್ರಹಾಂ ಕೆ.ಪಿ ನೆಲ್ಯಾಡಿ ಅವರು ನೆಲ್ಯಾಡಿ ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾಗಿ, ಕಡಬ ಬ್ಲಾಕ್ ಕಾಂಗ್ರೆಸ್ಸಿನ ಮಾಜಿ ಉಪಾಧ್ಯಕ್ಷರಾಗಿ, ಮಲಂಕರ ಆರ್ಥೊಡಾಕ್ಸ್ ಸಭೆಯ ಅಸೋಸಿಯೇಷನ್ ಸದಸ್ಯರಾಗಿ, ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಇಸ್ಮಾಯಿಲ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಇವರು ನೆಲ್ಯಾಡಿ ಪಿಎಂಶ್ರೀ ಸರಕಾರಿ ಶಾಲೆಯ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜು ಪೂರ್ವ ವಿದ್ಯಾರ್ಥಿ ಸಂಘದ ಕೋಶಾಧಿಕಾರಿಯಾಗಿ, ಪುತ್ತೂರು ಸೀರತ್ ಕಮಿಟಿ ಕಾರ್ಯದರ್ಶಿಯಾಗಿ, ಮಂಗಳೂರು ಹಿದಾಯ ಪೌಂಡೇಶನ್ ಕಾನೂನು ಸಲಹೆಗಾರರಾಗಿ, ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಲೆಕ್ಕ ಪರಿಶೋಧಕರಾಗಿ ಸಹಿತ ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ದ.ಕ.ಜಿಲ್ಲಾ ವಕ್ಪ್ ಸಲಹಾ ಸಮಿತಿ ಸದಸ್ಯರಾಗಿ, ಪುತ್ತೂರು ತಾಲೂಕು ಕೆಡಿಪಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.






