ಬೆಳ್ತಂಗಡಿಯಲ್ಲಿ ಕುಖ್ಯಾತ ಕಳ್ಳನ ಸೆರೆ — 13 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಪೂಂಜಾಲಕಟ್ಟೆ ಪೊಲೀಸರ ಬಲೆಗೆ

ಶೇರ್ ಮಾಡಿ

ಬೆಳ್ತಂಗಡಿ: ಮಾಲಾಡಿ ಗ್ರಾಮದಲ್ಲಿ ವಿದೇಶದಲ್ಲಿದ್ದ ಮಹಿಳೆಯ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಕೇರಳ ಮೂಲದ ಆರೋಪಿಯನ್ನು ಸ್ಥಳೀಯರ ಸಹಾಯದಿಂದ ಹಿಡಿದು, ಪೂಂಜಾಲಕಟ್ಟೆ ಪೊಲೀಸರಿಗೆ ಒಪ್ಪಿಸಿದ ಘಟನೆ ನ.9 ರಂದು ಬೆಳಿಗ್ಗೆ ನಡೆದಿದೆ.

ಪಿರ್ಯಾದಿದಾರರಾದ ಪ್ರಕಾಶ್‌ ಶೆಟ್ಟಿ ಅವರ ದೂರಿನಂತೆ, ಪ್ರೇಮಾ ಶೆಟ್ಟಿಯವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಆರೋಪಿತ ಕೇರಳದ ತಲಪಾಡಿ ಮೂಲದ ಕಿರಣ್‌ ಎಂಬಾತನಾಗಿದ್ದು, ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ನಗರ ವ್ಯಾಪ್ತಿ ಹಾಗೂ ಕೇರಳ ರಾಜ್ಯದ ವಿವಿಧ ಠಾಣೆಗಳಲ್ಲಿ ಸೇರಿ ಒಟ್ಟು 13 ಅಪರಾಧ ಪ್ರಕರಣಗಳು ದಾಖಲಾಗಿರುವುದು ಬಹಿರಂಗಗೊಂಡಿದೆ.

ತನಿಖೆ ಮುಂದುವರಿದಿದ್ದು, ಈ ಕುಖ್ಯಾತ ಆರೋಪಿಯ ಕ್ರಿಮಿನಲ್ ಜಾಲದ ನಂಟುಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿದ್ದಾರೆ ಪೊಲೀಸರು.

  •  

Leave a Reply

error: Content is protected !!