

ನೆಲ್ಯಾಡಿ: ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ–ಬಾಲಕಿಯರ ಕ್ರೀಡಾಕೂಟ ನ.8 ಮತ್ತು 9ರಂದು ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೆರವೇರಿತು.
ಈ ಕ್ರೀಡಾಕೂಟದಲ್ಲಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿನಿ ಚಂದನ ಕೆ.ವಿ ಅವರು 17ರ ವಯೋಮಾನದ ಬಾಲಕಿಯರ ವಿಭಾಗದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕಟ್ಟೆಮೆಜಲು ನಿವಾಸಿ ಕಾಂತ ಗೌಡ ಕೆ. ಹಾಗೂ ವಿಜಯಲಕ್ಷ್ಮಿ ಪಿ. ದಂಪತಿಗಳ ಪುತ್ರಿಯಾಗಿದ್ದಾರೆ.
17ರ ವಯೋಮಾನದ ಬಾಲಕರ ವಿಭಾಗದ ಉದ್ದಜಿಗಿತ ಸ್ಪರ್ಧೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಯಶವಂತ ತೃತೀಯ ಸ್ಥಾನ ಪಡೆದರು.
ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ನಿರ್ದೇಶಕ ಮಹಮ್ಮದ್ ಹಾರಿಸ್ ತರಬೇತಿ ನೀಡಿದ್ದರು.ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಫಾ.ಅನೀಶ್ ಪಾರಶೆರಿಲ್, ಸಂಚಾಲಕ ಫಾ.ನೋಮಿಸ್ ಕುರಿಯಕೋಸ್, ಪ್ರಾಂಶುಪಾಲ ಎಂ.ಕೆ. ಏಲಿಯಾಸ್, ಮುಖ್ಯಶಿಕ್ಷಕ ತೋಮಸ್ ಎಂ.ಐ. ಹಾಗೂ ಹರಿಪ್ರಸಾದ್ ಕೆ., ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಅಭಿನಂದನೆ ಸಲ್ಲಿಸಿದರು.






