ನೆಲ್ಯಾಡಿ ಗ್ರಾ.ಪಂ. ವಾರದ ಸಂತೆಯ ಫೀಸು, ಹಸಿ ಮೀನು ಮಾರಾಟದ ಹಕ್ಕಿನ ಬಹಿರಂಗ ಏಲಂ

ಶೇರ್ ಮಾಡಿ

ನೇಸರ ಮಾ.17: ನೆಲ್ಯಾಡಿ ಗ್ರಾಮ ಪಂಚಾಯತ್‌ಗೆ ಒಳಪಟ್ಟ ನೆಲ್ಯಾಡಿ ವಾರದ ಸಂತೆಯ ಫೀಸು ವಸೂಲಿ, ಹಸಿ ಮೀನು ಮಾರಾಟದ ಹಕ್ಕು ಹಾಗೂ ಪಂಚಾಯತ್ ಸ್ಟಾಲ್ ನಂಬ್ರ 7ರ ಬಹಿರಂಗ ಏಲಂ ಪ್ರಕ್ರಿಯೆ ಮಾ.16ರಂದು ಬೆಳಗ್ಗೆ ಗ್ರಾ.ಪಂ. ಅಧ್ಯಕ್ಷೆ ಚೇತನಾ ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ನೆಲ್ಯಾಡಿ ವಾರದ ಸಂತೆಯ ಫೀಸು ವಸೂಲಿ ಹಕ್ಕು ವಾರ್ಷಿಕ ರೂ.3.12 ಲಕ್ಷಕ್ಕೆ ಖಾಯಂಗೊಂಡಿದ್ದು ಹಸಿ ಮೀನು ಮಾರಾಟದ ಹಕ್ಕಿನಲ್ಲೂ ಏರಿಕೆಯಾಗಿದೆ. ಸಂತೆಯಲ್ಲಿ

ಫೀಸು ವಸೂಲಿ ಹಕ್ಕು: ನೆಲ್ಯಾಡಿ ವಾರದ ಸಂತೆಯಲ್ಲಿ 1-4-2022ರಿಂದ 31-3-2023ರ ತನಕದ 1 ವರ್ಷದ ಅವಧಿಯ ಫೀಸು ವಸೂಲಿ ಹಕ್ಕನ್ನು ಜೀವನ್ ಡಿ.ಸೋಜ ಎಂಬವರು 3.12 ಲಕ್ಷ ರೂಪಾಯಿಗೆ ಪಡೆದುಕೊಂಡಿದ್ದಾರೆ. ಅನ್ವರ್ ಸಾದಿಕ್, ಸರ್ಫರಾಜ್‌ರವರು ಏಲಂ ಪ್ರಕ್ರಿಯೆಯಲ್ಲಿ ಭಾಗಿಗಳಾಗಿದ್ದರು. ಕಳೆದ ವರ್ಷ ನೆಲ್ಯಾಡಿ ವಾರದ ಸಂತೆಯಲ್ಲಿ ಫೀಸು ವಸೂಲಿ ಹಕ್ಕು 2.04 ಲಕ್ಷಕ್ಕೆ ಏಲಂ ಆಗಿತ್ತು. ಈ ಬಾರಿ ಫೀಸು ವಸೂಲಿ ಹಕ್ಕಿನಲ್ಲಿ ಏರಿಕೆಯಾಗಿದ್ದು 3.12 ಲಕ್ಷ ರೂಪಾಯಿಗೆ ಏಲಂ ಖಾಯಂಗೊಂಡಿದೆ.

ವೀಕ್ಷಿಸಿ Subscribers ಮಾಡಿ

ಹಸಿ ಮೀನು ಮಾರಾಟದ ಹಕ್ಕುಗಳು: ಗ್ರಾಮ ಪಂಚಾಯತ್‌ನ ಹಸಿ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟದ ಹಕ್ಕಿನ ಏಲಂ ಪ್ರಕ್ರಿಯೆಯೂ ನಡೆಯಿತು. 1-4-2022ರಿಂದ 31-3-2023ರ ತನಕದ ಅವಧಿಗೆ ಹಸಿ ಮೀನು ಮಾರುಕಟ್ಟೆ ಸ್ಟಾಲ್ ನಂಬರ್ 1ರಲ್ಲಿ ಮೀನು ಮಾರಾಟದ ಹಕ್ಕನ್ನು ಟಿಪ್ಪು ಸುಲ್ತಾನ್‌ರವರು 1.62 ಲಕ್ಷ ರೂಪಾಯಿಗೆ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಸ್ಟಾಲ್ ನಂಬರ್ 1ರಲ್ಲಿನ ಮೀನು ಮಾರಾಟದ ಹಕ್ಕು 41,100ರೂಪಾಯಿಗೆ ಏಲಂ ಆಗಿತ್ತು. ಸ್ಟಾಲ್ ನಂಬ್ರ 2ರಲ್ಲಿನ ಮೀನು ಮಾರಾಟದ ಹಕ್ಕನ್ನು 65,500 ರೂಪಾಯಿಗೆ ಅಬ್ದುಲ್ ರಜಾಕ್‌ರವರು ಪಡೆದುಕೊಂಡರು. ಕಳೆದ ವರ್ಷ ಸ್ಟಾಲ್ ನಂಬರ್ 2ರಲ್ಲಿನ ಮೀನು ಮಾರಾಟದ ಹಕ್ಕು 33,100 ರೂಪಾಯಿಗೆ ಏಲಂ ಆಗಿತ್ತು. ಸ್ಟಾಲ್ ನಂಬ್ರ 3ರಲ್ಲಿನ ಮೀನು ಮಾರಾಟದ ಹಕ್ಕನ್ನು 30,500 ರೂಪಾಯಿಗೆ ಅಬ್ದುಲ್ ರಜಾಕ್‌ರವರು ಪಡೆದುಕೊಂಡಿದ್ದಾರೆ. ಕಳೆದ ವರ್ಷ ಸ್ಟಾಲ್ ನಂಬ್ರ 3ರಲ್ಲಿನ ಮೀನು ಮಾರಾಟದ ಹಕ್ಕು 34,100 ರೂಪಾಯಿಗೆ ಏಲಂ ಆಗಿತ್ತು. ಅಬ್ದುಲ್ ರಜಾಕ್, ಸರ್ಫರಾಜ್, ಇಲಿಯಾಸ್, ಟಿಪ್ಪು ಸುಲ್ತಾನ್, ಜೀವನ್ ಡಿ.ಸೋಜರವರು ಹಸಿ ಮೀನು ಮಾರುಕಟ್ಟೆಯಲ್ಲಿನ ಮೀನು ಮಾರಾಟದ ಹಕ್ಕಿನ ಏಲಂ ಪ್ರಕ್ರಿಯೆಯಲ್ಲಿ ಬಿಡ್ಡುದಾರರಾಗಿ ಭಾಗವಹಿಸಿದ್ದರು.

ಸ್ಟಾಲ್ ನಂಬ್ರ 7ರ ಹಕ್ಕು: ಗ್ರಾಮ ಪಂಚಾಯತ್‌ನ ಸ್ಟಾಲ್ ನಂಬ್ರ 7ರ ಅನುಭೋಗದ ಹಕ್ಕನ್ನು 25,200 ರೂಪಾಯಿಗೆ ತಿಮ್ಮಪ್ಪ ಗೌಡರವರು ಪಡೆದುಕೊಂಡರು. ಎನ್.ಅಬ್ದುಲ್ಲಾ, ಟಿಪ್ಪು ಸುಲ್ತಾನ್‌ರವರು ಬಿಡ್ಡುದಾರರಾಗಿದ್ದರು. ಗ್ರಾ.ಪಂ.ಸಿಬ್ಬಂದಿ ಶಿವಪ್ರಸಾದ್‌ರವರು ಏಲಂ ಪ್ರಕ್ರಿಯೆ ನಡೆಸಿದರು. ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಪಿಡಿಒ ಮಂಜುಳ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯರುಗಳಾದ ಆನಂದ ಪಿಲವೂರು, ಮೊಹಮ್ಮದ್ ಇಕ್ಬಾಲ್, ಯಾಕೂಬು ಸಲಾಂ, ರೇಷ್ಮಾಶಶಿ, ಜಯಂತಿ ಮಾದೇರಿ, ಪುಷ್ಪಾ ಪಡುಬೆಟ್ಟು, ಜಯಲಕ್ಷ್ಮೀಪ್ರಸಾದ್ ಉಪಸ್ಥಿತರಿದ್ದರು. ಸಿಬ್ಬಂದಿಗಳು ಸಹಕರಿಸಿದರು.

—-ಜಾಹೀರಾತು—–

Leave a Reply

error: Content is protected !!