ಪಿಯು ಪಾಸಾದವರಿಗೆ ಗುಡ್‌ನ್ಯೂಸ್‌ : 1500 ಪಿಸಿ ನೇಮಕ

ಶೇರ್ ಮಾಡಿ

ನೇಮಕಾತಿ ಇಲಾಖೆ : ಪೊಲೀಸ್ ಇಲಾಖೆ
ಹುದ್ದೆ ಹೆಸರು : ಪೊಲೀಸ್ ಕಾನ್ಸ್‌ಟೇಬಲ್
ಒಟ್ಟು ಹುದ್ದೆಗಳ ಸಂಖ್ಯೆ : 1500
ನಾನ್‌ ಹೈದೆರಾಬಾದ್‌ ಕರ್ನಾಟಕ ಹುದ್ದೆಗಳು : 1068
ಹೈದೆರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಾದ ಹುದ್ದೆಗಳು : 432

ನೇಸರ ಮಾ.16: ಕರ್ನಾಟಕ ಪೊಲೀಸ್ ಇಲಾಖೆ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ಒಂದನ್ನು ಇದೀಗ ನೀಡಿದೆ. ಇಲಾಖೆಯು ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಒಟ್ಟು 1500 ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಈ ಹುದ್ದೆಗಳಿಗೆ ಏಪ್ರಿಲ್‌ ಮೊದಲ ವಾರದಲ್ಲಿ ಅಧಿಕೃತ ನೋಟಿಫಿಕೇಶನ್‌ ಪ್ರಕಟವಾಗಲಿದ್ದು, ಏಪ್ರಿಲ್‌ 30 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ಕರ್ನಾಟಕ ರಾಜ್ಯ ಸರ್ಕಾರಿ ಹುದ್ದೆಯಾದ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗೆ ಸೇರಬೇಕು ಎಂದು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ಎಲ್ಲ ದಾಖಲೆಗಳೊಂದಿಗೆ ಸಿದ್ಧರಿರಿ.
01-04-2022 ರಿಂದ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸದರಿ ಹುದ್ದೆಗಳಿಗೆ ಅರ್ಹತೆಗಳೇನು, ವಯೋಮಿತಿ ಹಾಗೂ ಇತರೆ ಮಾಹಿತಿಗಳು ಈ ಕೆಳಗಿನಂತಿವೆ.
ವಿದ್ಯಾರ್ಹತೆ:
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್‌ ಮಾಡಿರಬೇಕು.
ಅರ್ಜಿ ಶುಲ್ಕ (ಸಂಭಾವ್ಯ):
ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ ರೂ.400.
SC / ST / Cat-01 ಅಭ್ಯರ್ಥಿಗಳಿಗೆ ರೂ.200.
ಅರ್ಜಿ ಶುಲ್ಕವನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್ / ಅಂಚೆ ಕಛೇರಿಯಲ್ಲಿ ಮಾತ್ರ ಪಾವತಿಸತಕ್ಕದ್ದು:
ಪೊಲೀಸ್ ಕಾನ್ಸ್‌ಟೇಬಲ್(ನಾಗರಿಕ) ಹುದ್ದೆಗಳಿಗೆ ವಯೋಮಿತಿ ಅರ್ಹತೆಗಳು
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 19 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ ಶ್ರೇಣಿ: ರೂ.23500-47650
ಅರ್ಜಿ ಸಲ್ಲಿಕೆಗೆ ಸಂಭಾವ್ಯ ವೇಳಾಪಟ್ಟಿ:
ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01-04-2022
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-04-2022
ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ದೈಹಿಕ ಸಾಮರ್ಥ್ಯ ಪರೀಕ್ಷೆ / ಸಹಿಷ್ಣುತಾ ಪರೀಕ್ಷೆ ನಡೆಸಿ ಅಯ್ಕೆ ಮಾಡಲಾಗುತ್ತದೆ.

ವೀಕ್ಷಿಸಿ Subscribers ಮಾಡಿ

Leave a Reply

error: Content is protected !!