ನೇಸರ ಮಾ.16: ಬೂಡುಜಾಲು ನಾಡದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿಯು ದೈವಗಳ ಬೀಡಿನಲ್ಲಿ ಮಾ.14 ರಂದು ಜರುಗಿತು. ದೊಂಪದಬಲಿ ಜಾತ್ರೆಯು ಮಠಂತಿಮಾರಿನಲ್ಲಿ ಮಾ.15 ರಂದು ಜರುಗಿತು.
ಮಾ.14 ರಂದು ರಾತ್ರಿ ದೈವಗಳ ಬೀಡಿನಲ್ಲಿ ಬೂಲ್ಯ ಸೇವೆ, ಉಳ್ಳಾಲ್ತಿ ನೇಮೋತ್ಸವ, ನಾಡದೈವ ನೇಮೋತ್ಸವ, ಕಲ್ಕುಡ-ಕಲ್ಲುರ್ಟಿ ದೈವಗಳ ನೇಮೋತ್ಸವ ಜರುಗಿತು.
ಮಾ.15ರಂದು ರಾತ್ರಿ ದೈವದ ಬೀಡಿನಲ್ಲಿ ಬೂಲ್ಯ ಸೇವೆ, ದೈವಗಳ ಬೀಡಿನಿಂದ ಮಠಂತಿಮಾರಿಗೆ ದೈವದ ಭಂಡಾರ ಬಂದು ನಂತರ ಹೂವಿನ ಪೂಜೆ, ಉಳ್ಳಾಲ್ತಿ ನೇಮೋತ್ಸವ, ನಾಡ ದೈವ ನೇಮೋತ್ಸವ, ಕಲ್ಕುಡ ಕಲ್ಲುರ್ಟಿ ದೈವಗಳ ನೇಮೋತ್ಸವ ಜರುಗಿತು. ಭಂಡಾರ ಬಂದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ಮೊಕ್ತೇಸರರರು, ಆಡಳಿತದಾರರು, ಅಪಾರ ಸಂಖ್ಯೆಯಲ್ಲಿ ಊರ-ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.
—ಜಾಹೀರಾತು—