ರಾಷ್ಟ್ರೀಯ ಮಟ್ಟದ ಅರ್ಹತಾ ಪಡೆದ ನಿವೃತ್ತ ಕೋಚ್ ಮೂಲಕ ತರಬೇತಿ – ನೋಂದಣಿ ಆರಂಭ


ನೆಲ್ಯಾಡಿ: ಎಲೈಟ್ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಎಲೈಟ್ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ಬ್ಯಾಡ್ಮಿಂಟನ್ ತರಬೇತಿ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಗುಣಮಟ್ಟದ ತರಬೇತಿ ನೀಡುವ ಉದ್ದೇಶದಿಂದ ಈ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ.
ಡಿ.24ರಿಂದ ಬ್ಯಾಡ್ಮಿಂಟನ್ ಕೋಚಿಂಗ್ ತರಗತಿಗಳು ಪ್ರಾರಂಭವಾಗಲಿದ್ದು, ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. 8 ವರ್ಷ ಮೇಲ್ಪಟ್ಟ ಬಾಲಕ–ಬಾಲಕಿಯರು ಈ ತರಬೇತಿ ತರಗತಿಗಳಿಗೆ ಸೇರಿಕೊಳ್ಳಬಹುದಾಗಿದೆ.
ರಾಷ್ಟ್ರೀಯ ಮಟ್ಟದ ಅರ್ಹತೆ ಹೊಂದಿರುವ ನಿವೃತ್ತ ಬ್ಯಾಡ್ಮಿಂಟನ್ ಕೋಚ್ ತರಗತಿಗಳನ್ನು ನಡೆಸಲಿದ್ದು, ಕ್ರೀಡಾ ಕೌಶಲ್ಯ ವಿಕಸನ, ತಂತ್ರಜ್ಞಾನಾಧಾರಿತ ಆಟದ ತರಬೇತಿ ಹಾಗೂ ಶಿಸ್ತುಬದ್ಧ ಅಭ್ಯಾಸಕ್ಕೆ ವಿಶೇಷ ಒತ್ತು ನೀಡಲಾಗುತ್ತದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.
ಶುಲ್ಕ ವಿವರ:
17 ವರ್ಷದೊಳಗಿನ ಬಾಲಕ–ಬಾಲಕಿಯರು (ಪ್ರತಿ ವಿದ್ಯಾರ್ಥಿ): ತಿಂಗಳಿಗೆ ₹1500
17 ವರ್ಷ ಮೇಲ್ಪಟ್ಟವರು (ಪ್ರತಿ ವಿದ್ಯಾರ್ಥಿ): ತಿಂಗಳಿಗೆ ₹2000
(ಶುಲ್ಕದಲ್ಲಿ ಶಟಲ್ ಕಾಕ್ ವ್ಯವಸ್ಥೆಯೂ ಒಳಗೊಂಡಿರುತ್ತದೆ.)
ತರಗತಿ ಸಮಯ:
ಬ್ಯಾಚ್–1: ಬೆಳಗ್ಗೆ 6.30ರಿಂದ 8.30ರವರೆಗೆ (15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ)
ಬ್ಯಾಚ್–2: ಸಂಜೆ 4.30ರಿಂದ 6.30ರವರೆಗೆ (15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ)
ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿರುವುದರಿಂದ ಆಸಕ್ತರು ಶೀಘ್ರದಲ್ಲೇ ನೋಂದಣಿ ಮಾಡಿಕೊಳ್ಳುವಂತೆ ಅಕಾಡೆಮಿ ಆಡಳಿತ ಮಂಡಳಿ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಸಂಪರ್ಕಿಸಬಹುದು:
ಶಿಬು ವರ್ಗೀಸ್: 9880799635, ಶ್ರೀಜಿತ್: 8296764376






