


ಕೊಕ್ಕಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿರಳವಾಗಿರುವ ವಿಠ್ಠಲ ದೇವಸ್ಥಾನಗಳ ಪೈಕಿ ಒಂದಾಗಿರುವ ಹತ್ಯಡ್ಕ ಗ್ರಾಮದ ನೆಕ್ಕರಡ್ಕ ಶ್ರೀ ವಿಠೋಬಾ ರಕುಮಾಯಿ ದೇವಸ್ಥಾನವು ನವೀಕರಣಗೊಳ್ಳುತ್ತಿದ್ದು ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜರವರು ಶಾಸಕರ ಅನುದಾನದಲ್ಲಿ 5 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ.
ಅರಸಿನಮಕ್ಕಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್., ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅನಂತ ಗೋಖಲೆ, ಕಾರ್ಯದರ್ಶಿ ಜಿತೇಂದ್ರ ಗೋಖಲೆ, ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಕೆ. ಹೊಸ್ತೋಟ, ದೇವಳದ ಪ್ರಮುಖರಾದ ಪ್ರಭಾಕರ ಹೆಬ್ಬಾರ್ ಕೊಡಂಗೆ, ದಿನೇಶ್ ಮೆಹೆಂದಳೆ, ಅನಿಲ್ ಕುಮಾರ್, ಕಾರ್ತಿಕ್ ಹೆಬ್ಬಾರ್ ಗೋಖಲೆ, ನವೀನ್ ಶೆಂಡ್ಯೆ,ಬಿಜೆಪಿ ಮುಖಂಡರಾದ ವೃಷಾಂಕ್ ಖಾಡಿಲ್ಕರ್, ಶ್ರೀಕಾಂತ್ ಕೆ. ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಶಾಸಕರನ್ನು ದೇವಳದ ಸಮಿತಿ ವತಿಯಿಂದ ಗೌರವಿಸಲಾಯಿತು.





