


ನೆಲ್ಯಾಡಿ: ಆರ್ಲ ಸೈಂಟ್ ಮೇರಿಸ್ ಚರ್ಚ್ ನಲ್ಲಿ ಮಾತೆ ಮರಿಯಮ್ಮನವರ ವಾರ್ಷಿಕ ಹಬ್ಬ, ತ್ರೀ ಕಿಂಗ್ಸ್ ಹಾಗೂ ಸಂತ ಸೇಬಾಸ್ಟಿಯನ್ ಇವರ ವಾರ್ಷಿಕ ಮಹೋತ್ಸವವು ಭಕ್ತಿಭಾವ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು.
ಚರ್ಚ್‌ನ ಧರ್ಮಗುರುಗಳಾದ ವಂ.ಫಾ.ಶಾಜಿ ಮಾತ್ಯು ಹಾಗೂ ಫಾ.ಅಲೆಕ್ಸ್ ಜೋನ್ಸನ್ ಅವರು ದ್ವಜಾರೋಹಣ ನೆರವೇರಿಸುವ ಮೂಲಕ ಹಬ್ಬದ ಧಾರ್ಮಿಕ ವಿಧಿವಿಧಾನಗಳಿಗೆ ಭಕ್ತಿಪೂರ್ವಕ ಚಾಲನೆ ನೀಡಿದರು.
ಶನಿವಾರ ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ಪರಮಪೂಜ್ಯ ಅತಿವಂದನೀಯ ಬಿಷಪ್ ಜೇಮ್ಸ್ ಪಟ್ಟೀರಿಲ್ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಭಾನುವಾರ ವಿಧಿವಿಧಾನಪೂರ್ವಕವಾಗಿ ನಡೆದ ರಾಸ ಬಲಿಪೂಜೆಯೊಂದಿಗೆ ವಾರ್ಷಿಕ ಮಹೋತ್ಸವವು ಸಮಾಪ್ತಿಗೊಂಡಿತು. ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿ ಪ್ರಸಿದೆಂತಿಗಳು ಹರಕೆಯಾಗಿ ವಾರ್ಷಿಕೋತ್ಸವವನ್ನು ವಹಿಸಿಕೊಂಡಿದ್ದರು. ಬಾಬು ಮುಳವೇಲಿಪ ರಂಭಿಲ್, ಹೃದಿತ್ ಪುದುಮನ, ಜೋಸ್ಟಿನ್ ನೆನ್ಮಣಿಮುಟ್ಟಮ್ ಹಾಗೂ ಜೈಸನ್ ಕುಳತ್ತಿನಾಲ್ ಅವರು ಟ್ರಸ್ಟಿಗಳಾಗಿ ಸೇವೆ ಸಲ್ಲಿಸಿದರು. ಕೋಶಾಧಿಕಾರಿ ಸೇಬಾಸ್ಟಿಯನ್ ಪುಳಿಕಾಯತ್, ಕಾರ್ಯದರ್ಶಿ ಜೇಮ್ಸ್ ಪುದುಮನ ಕಾರ್ಯನಿರ್ವಹಿಸಿದರು.





