ಕ್ಯಾಂಪ್ಕೋ ‘ಸಾಂತ್ವನ’ ಯೋಜನೆಯಡಿ ನೆಲ್ಯಾಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ

ಶೇರ್ ಮಾಡಿ

ನೆಲ್ಯಾಡಿ: ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ಜ.19ರಂದು ನೆಲ್ಯಾಡಿಯಲ್ಲಿ ನಡೆಯಿತು.

ಕ್ಯಾಂಪ್ಕೋ ಸಂಸ್ಥೆ ನೆಲ್ಯಾಡಿ ಶಾಖೆಯ ಸಕ್ರಿಯ ಸದಸ್ಯ ರಂಜನ್ ಕೆ.ಜೆ. ಅವರ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸಹಾಯವಾಗುವಂತೆ, ಕ್ಯಾಂಪ್ಕೋ ಸಹಾಯಧನದ ಮೊತ್ತ ₹50,000 ರೂ.ಗಳ ಚೆಕ್ ಅನ್ನು ಸಂಸ್ಥೆಯ ಗೌರವಾನ್ವಿತ ನಿರ್ದೇಶಕ ಮುರಳೀಕೃಷ್ಣ ಕೆ.ಎನ್. ಹಾಗೂ ಮಾಲಿನಿ ಪ್ರಸಾದ್ ಅವರು ರಂಜನ್ ಕೆ.ಜೆ. ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕ ಸೀನಿಯರ್ ಮ್ಯಾನೇಜರ್ ಪ್ರಕಾಶ ಕುಮಾರ್ ಶೆಟ್ಟಿ, ನೆಲ್ಯಾಡಿ ಶಾಖೆಯ ಶಾಖಾ ಪ್ರಬಂಧಕರಾದ ಪ್ರಥಮ್ ಕುಮಾರ್, ಶಾಖೆಯ ಸಿಬ್ಬಂದಿ ವರ್ಗ ಹಾಗೂ ಸದಸ್ಯ ಬೆಳೆಗಾರ ಪಾರ್ಶ್ವನಾಥ ಉಪಸ್ಥಿತರಿದ್ದರು.

Leave a Reply

error: Content is protected !!