


ಕೊಕ್ಕಡ: ಕೌಕ್ರಾಡಿ ಸಂತ ಜಾನ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ವಾರ್ಷಿಕ ಹಬ್ಬ ಸಂತ ಫ್ರಾನ್ಸಿಸ್ ಕ್ಷೇಮಿಯರ್ ದೇವಾಲಯ ಬಿಜೈ ಮಂಗಳೂರು ಇಲ್ಲಿನ ಧರ್ಮಗುರು ವಂ.ಜೆ.ಬಿ.ಸಲ್ಡಾನ ಅವರ ನೇತೃತ್ವದಲ್ಲಿ ಫೆ.11ರಂದು ನೆರವೇರಿತು.
ವಾರ್ಷಿಕ ಹಬ್ಬದ ಪ್ರಯುಕ್ತ ಬೆಳಿಗ್ಗೆ 10 ಗಂಟೆಗೆ ದಿವ್ಯ ಬಲಿಪೂಜೆಯನ್ನು ನೇರವೆರಿಸಿದರು. ಕೊಕ್ಕಡ ಚರ್ಚಿನ ಧರ್ಮಗುರು ವಂ.ಅನಿಲ್ ಪ್ರಕಾಶ್ ಡಿಸಿಲ್ವಾ ಹಾಗೂ ಪುತ್ತೂರು ವಲಯದ ಧರ್ಮಗುರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಜೃಂಭಣೆಯಿಂದ ವಾರ್ಷಿಕ ಹಬ್ಬ ಆಚರಿಸಲಾಯಿತು. ಸಹಕರಿಸಿದ ಎಲ್ಲಾ ಸದಸ್ಯರಿಗೆ ಧರ್ಮಗುರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷೆ ಶಾಂತಿಪ್ರಿಯಾ ಡಿಸೋಜ, ಕಾರ್ಯದರ್ಶಿ ಲವೀನಾ ಡಿಸೋಜ, ಸದಸ್ಯರು ಹಾಗೂ ಭಕ್ತಾದಿಗಳು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.







