

ಕೊಕ್ಕಡ: ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಯಿಂದ ಗೊಳಿತೊಟ್ಟು ಸಂಪರ್ಕ ನೀಡುವ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿದ್ದ ದೊಡ್ಡ ದೊಡ್ಡ ಹೊಂಡಗಳು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ, ಸ್ಥಳೀಯರ ಮುಂದಾಳತ್ವದಲ್ಲಿ ಶ್ರಮದಾನ ನಡೆಯಿತು.
ಶ್ರದ್ದಾ ಗೆಳೆಯರ ಬಳಗ ಉಪ್ಪಾರಪಳಿಕೆ ಹಾಗೂ ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ ನೇತೃತ್ವದಲ್ಲಿ, ಕೊಕ್ಕಡ ಅಮೃತ ಗ್ರಾಮ ಪಂಚಾಯತ್ ಸಹಕಾರ ಮತ್ತು ಸ್ಥಳೀಯ ದಾನಿಗಳ ನೆರವಿನಿಂದ ರಸ್ತೆ ಹೊಂಡಗಳಿಗೆ ಕಾಂಕ್ರೀಟ್ ಹಾಕಿ ಮುಚ್ಚುವ ಜೊತೆಗೆ ರಸ್ತೆಯ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸಿದರು.
ಕಾರ್ಯಕ್ರಮಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್, ಕಲ್ಕೂಡ ಕಲ್ಲುರ್ಟಿ ಗ್ರಾಮ ದೈವಸ್ಥಾನ ಕೆಂಪಕೋಡಿ ಟ್ರಸ್ಟ್ ಅಧ್ಯಕ್ಷ ನಾರಾಯಣ ಗೌಡ ಆಳಂಬಿಲ, ಕಾರ್ಯದರ್ಶಿ ಜಗದೀಶ್ ಕೆಂಪಕೋಡಿ ಭೇಟಿ ನೀಡಿ ಶ್ರಮದಾನಕ್ಕೆ ಶುಭ ಹಾರೈಸಿದರು. ಕಾಂಕ್ರೀಟ್ ಕಾಮಗಾರಿಗೆ ಅಗತ್ಯವಾದ ವಾಹನವನ್ನು ಶ್ರೀಕಾಂತ್ ಬಡೆಕಾಯಿಲ್ ಮತ್ತು ಶ್ರೀಪಾದ್ ಬಡೆಕಾಯಿಲ್ ಒದಗಿಸಿದ್ದು, ಅನ್ನದಾನ ವ್ಯವಸ್ಥೆಗೆ ಜಯಪ್ರಕಾಶ್ ಕಲ್ಲಡ್ಕ, ದೇರಾಜೆ ರೆಂಜರ್ ಮಂಗಳೂರು ಸಹಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಯೋಗೀಶ್ ಆಳಂಬಿಲ, ಅಧ್ಯಕ್ಷ ಶ್ರೀನಾಥ್ ಬಡೆಕಾಯಿಲ್, ಪದಾಧಿಕಾರಿಗಳು, ಸದಸ್ಯರು, ಜೊತೆಗೆ ಶ್ರದ್ದಾ ಗೆಳೆಯರ ಬಳಗದ ಅಧ್ಯಕ್ಷ ಜೀವನ್ ಕೊಡಿಗೇರಿ, ಕಾರ್ಯದರ್ಶಿ ಶ್ರೀಪಾದ್ ಬಡೆಕಾಯಿಲ್ ಮತ್ತು ತಂಡದ ಸದಸ್ಯರು, ಭಜನಾ ಮಂದಿರ ಪ್ರಾರಂಭೋತ್ಸವ ಸಮಿತಿ ಕಾರ್ಯದರ್ಶಿ ಶಿವಾನಂದ ಸಂಕೇಶ ಸಕ್ರಿಯವಾಗಿ ಶ್ರಮದಾನದಿಲ್ಲಿ ಭಾಗವಹಿಸಿದರು.







