ಕಡಬ: ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ನೀಡಿಕೆ ಶಿಬಿರ

ಶೇರ್ ಮಾಡಿ
ಕಡಬ: ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ನೀಡಿಕೆ ಶಿಬಿರ

ಕಡಬ: ಮನುಷ್ಯನಿಗೆ ಆರೋಗ್ಯ ಎನ್ನುವುದು ಬಲುದೊಡ್ಡ ಸಂಪತ್ತು. ರೋಗ ಬಂದ ಮೇಲೆ ಚಿಕಿತ್ರೆಗಾಗಿ ಪರಿತಪಿಸುವ ಬದಲು ರೋಗ ಬಾರದಂತೆ ಮುಂಜಾಗರೂಕತೆ ವಹಿಸುವುದು ಜಾಣತನ ಎಂದು ಕಡಬ ಏಕಾಹ ಭಜನೋತ್ಸವ ಸಮಿತಿಯ ಅಧ್ಯಕ್ಷ ದಯಾನಂದ ಗೌಡ ಆರಿಗ ಅವರು ಅಭಿಪ್ರಾಯಪಟ್ಟರು.

ಅವರು ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್‌ ಟ್ರಸ್ಟ್‌ ನೇತೃತ್ವದಲ್ಲಿ ಪಶುಸಂಗೋಪನಾ ಇಲಾಖೆ ಹಾಗೂ ಕಡಬದ ಶ್ರೀಗಣೇಶ್‌ ಮೆಡಿಕಲ್ಸ್‌ನ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ನೀಡಿಕೆ ಶಿಬಿರವನ್ನು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಉದ್ಘಾಟಿಸಿ ಮಾತನಾಡಿದರು. ಎಲ್ಲೆಡೆ ಹುಚ್ಚುನಾಯಿಗಳು ಹಾಗೂ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂಘಟಕರು ಈ ರೀತಿಯ ಶಿಬಿರವನ್ನು ನಡೆಸುತ್ತಿರುವುದು ಸಮಯೋಚಿತವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಡಬ ಪಶು ವೈದ್ಯಕೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|ಅಜಿತ್‌ ಎಂ.ಸಿ. ಅವರು ಮುಖ್ಯಅತಿಥಿಯಾಗಿ ಆಗಮಿಸಿದ್ದರು. ಜೇಸಿಐ ಕಡಬ ಕದಂಬ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ನಾಗರಾಜ್‌ ಎನ್‌.ಕೆ., ಕಾರ್ಯಕ್ರಮ ನಿರ್ದೇಶಕ ಅನೀಶ್‌ ಲೋಬೋ, ಪದಾಧಿಕಾರಿಗಳಾದ ಕೃಷ್ಣ ಕಾರಂತ್‌, ದಿನೇಶ್‌ ತುಂಬೆತಡ್ಕ, ಮೆಬಿನ್‌, ರಾಜೇಶ್‌ ಎ.ಕೆ., ಎಲಿಜಬೆತ್‌, ಚೇತನ್‌ ಪ್ರಭು, ಕಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ವೀರೇಶ್‌, ರವಿತೇಜ್‌ ಪಡೆಜ್ಜಾರ್‌ ಮುಂತಾದವರು ಉಪಸ್ಥಿತರಿದ್ದರು.

ಜೇಸಿಐ ಕಡಬ ಕದಂಬದ ಅಧ್ಯಕ್ಷ ಜೇಮ್ಸ್‌ ಕ್ರಿಶಲ್‌ ಡಿಸೋಜ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್‌ರಹಿಮಾನ್‌ ವಂದಿಸಿದರು.

217 ನಾಯಿಗಳಿಗೆ ಲಸಿಕೆ:
ಕಡಬ, ಕೋಡಿಂಬಾಳ, 102ನೇ ನೆಕ್ಕಿಲಾಡಿ, ಬಂಟ್ರ, ರೆಂಜಿಲಾಡಿ, ನೂಜಿಬಾಳ್ತಿಲ, ಕುಟ್ರುಪ್ಪಾಡಿ ಹಾಗೂ ಬಲ್ಯ ಗ್ರಾಮಗಳ ವ್ಯಾಪ್ತಿಯಲ್ಲಿ ಜೇಸಿ ಸದಸ್ಯರು, ಪಶು ವೈದ್ಯರು ಹಾಗೂ ಪಶು ವೈದ್ಯಕೀಯ ಪರೀಕ್ಷಕರು 3ತಂಡಗಳಲ್ಲಿ ಸಂಚರಿಸಿ ನಿಗದಿಪಡಿಸಿದ ಸ್ಥಳಗಳಲ್ಲಿ ಒಟ್ಟು 217 ನಾಯಿಗಳಿಗೆ ಲಸಿಕೆ ನೀಡಲಾಯಿತು. ಕಡಬದ ಶ್ರೀಗಣೇಶ್‌ ಮೆಡಿಕಲ್ಸ್‌ನ ಮಾಲಕ ಅಜಿತ್‌ ಶೆಟ್ಟಿ ಅವರು ಲಸಿಕೆಯನ್ನು ಉಚಿತವಾಗಿ ನೀಡಿ ಸಹಕರಿಸಿದರು.

Leave a Reply

error: Content is protected !!