





ನೆಲ್ಯಾಡಿ: ಶುದ್ಧತೆ ಮತ್ತು ಪಾರದರ್ಶಕತೆಗೆ ಮಹತ್ವ ನೀಡುವ ಉದ್ದೇಶದಿಂದ ಸ್ಥಾಪಿತವಾಗಿರುವ ‘ಅಮ್ಮಾಸ್ ಆಯಿಲ್ ಮಿಲ್’ ನೆಲ್ಯಾಡಿಯ ವಿ.ಜೆ. ಕಾಂಪ್ಲೆಕ್ಸ್ ನಲ್ಲಿ ಸಂಸ್ಥೆಯ ಶುಭಾರಂಭವು ಮಾ.11ರ ಬುಧವಾರ ಬೆಳಿಗ್ಗೆ ನಡೆಯಲಿದೆ.
ಈ ಆಯಿಲ್ ಮಿಲ್‌ನಲ್ಲಿ ಗ್ರಾಹಕರ ಕಣ್ಣೆದುರೇ ಶುದ್ಧ ತೆಂಗಿನ ಎಣ್ಣೆಯನ್ನು ಹೊರತೆಗೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ರಾಸಾಯನಿಕಗಳ ಬಳಕೆ ಇಲ್ಲದೆ ಸಾಂಪ್ರದಾಯಿಕ ವಿಧಾನದಲ್ಲಿ ಎಣ್ಣೆ ಉತ್ಪಾದನೆ ಮಾಡುವುದು ಇದರ ಪ್ರಮುಖ ವಿಶೇಷತೆಯಾಗಿದೆ.
ಈ ಮಿಲ್‌ನಲ್ಲಿ ಕೋಲ್ಡ್ ಪ್ರೆಸ್ ವಿಧಾನದ ಮೂಲಕ ಶಾಖ ಉತ್ಪಾದನೆ ಆಗದಂತೆ ಎಣ್ಣೆ ಹೊರತೆಗೆಯಲಾಗುತ್ತದೆ. ಇದರ ಪರಿಣಾಮವಾಗಿ ತೆಂಗಿನ ಎಣ್ಣೆಯ ನೈಸರ್ಗಿಕ ಸುವಾಸನೆ ಹಾಗೂ ಪೋಷಕಾಂಶಗಳು ಉಳಿಯುವಂತೆ ವಿಶೇಷ ತಂತ್ರಜ್ಞಾನವನ್ನು ಬಳಸಲಾಗಿದೆ. ಜೊತೆಗೆ ಬಹು ಹಂತದ ಶೋಧನೆ ವ್ಯವಸ್ಥೆ ಮೂಲಕ ಶುದ್ಧ ಮತ್ತು ಗುಣಮಟ್ಟದ ಎಣ್ಣೆಯನ್ನು ಗ್ರಾಹಕರಿಗೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ಈ ಘಟಕದಲ್ಲಿ ಗಂಟೆಗೆ ಸುಮಾರು 100 ಕೆಜಿ ಕೊಬ್ಬರಿ ಅರೆಯುವ ಸಾಮರ್ಥ್ಯವಿದ್ದು, 24 ಗಂಟೆಗಳಲ್ಲಿ ಸುಮಾರು 500 ತೆಂಗಿನಕಾಯಿಗಳನ್ನು ಒಣಗಿಸುವ ವಿಶೇಷ ಸೌಲಭ್ಯವೂ ಲಭ್ಯವಿದೆ. ಸಂಪೂರ್ಣವಾಗಿ ಪಾರದರ್ಶಕ ಹಾಗೂ ಆರೋಗ್ಯಕರ ಪ್ರಕ್ರಿಯೆಯ ಮೂಲಕ ತಯಾರಾಗುವ ಈ ಎಣ್ಣೆ ಗ್ರಾಹಕರಿಗೆ ವಿಶ್ವಾಸಾರ್ಹ ಗುಣಮಟ್ಟವನ್ನು ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.
ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಈ ಮಿಲ್, ಸ್ಥಳೀಯ ರೈತರು ಹಾಗೂ ಗ್ರಾಹಕರಿಗೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 9902533281, 9591989464 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ವಿಳಾಸ:
ಅಮ್ಮಾಸ್ ಆಯಿಲ್ ಮಿಲ್,
ವಿ.ಜೆ. ಕಾಂಪ್ಲೆಕ್ಸ್, 2ನೇ ಅಂಡರ್‌ಪಾಸ್ ಹತ್ತಿರ,
ನೆಲ್ಯಾಡಿ, ಕಡಬ ತಾಲೂಕು,
ದಕ್ಷಿಣ ಕನ್ನಡ ಜಿಲ್ಲೆ – 574229.





