ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ

ಶೇರ್ ಮಾಡಿ

ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ (SSLC Exam) ಹಿಂದಿ ಪರೀಕ್ಷೆ (Hindi Exam) ಮಾ.31ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಪರೀಕ್ಷಾ ಬೋರ್ಡ್‌ (Exam Board) ಮಾಹಿತಿ ನೀಡಿದೆ

ಮಹಾವೀರ ಜಯಂತಿ ರಜೆ ಹಿಂದೂಡಿಕೆ ಮಾಡಿದ ಹಿನ್ನೆಲೆ ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾ.31ಕ್ಕೆ ಮುಂದೂಡಿಕೆ ಮಾಡಿದೆ.

ಈ ಮೊದಲು ಮಾ.31ಕ್ಕೆ ರಜೆಯಿದ್ದ ಹಿನ್ನೆಲೆ ಮಾ.30ಕ್ಕೆ ಹಿಂದಿ ಪರೀಕ್ಷೆ ನಿಗದಿಯಾಗಿತ್ತು. ಇದೀಗ ಸರ್ಕಾರ ಪರಿಷ್ಕರಣೆ ಮಾಡಿ, ಮಾ.31ರ ರಜೆಯನ್ನು ಮಾ.30ಕ್ಕೆ ಘೋಷಿಸಿದೆ. ಹೀಗಾಗಿ ಪರೀಕ್ಷಾ ದಿನಾಂಕವನ್ನು ಬದಲಿಸಿ, ಮಾ.31ಕ್ಕೆ ನಡೆಸಲು ತೀರ್ಮಾನಿಸಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದ್ದು, ಮಹಾವೀರ ಜಯಂತಿ ರಜೆ ಹಿಂದೂಡಿಕೆ ಮಾಡಿದ ಹಿನ್ನೆಲೆ ಪರೀಕ್ಷೆಯನ್ನು ಒಂದು ದಿನ ಮುಂದೂಡಿಕೆ ಮಾಡಲಾಗಿದೆ. ಮಾ.30ಕ್ಕೆ ಮಹಾವೀರ ಜಯಂತಿ ರಜೆ ಹಾಗೂ ಮಾ.31ಕ್ಕೆ ಹಿಂದಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ.

Leave a Reply

error: Content is protected !!