





ಇಚ್ಲಂಪಾಡಿ ಗ್ರಾಮದ ಕೊರಮೇರು ಕುಟುಂಬದ ಆದಿಮನೆಯಲ್ಲಿ ನವೀಕರಿಸಲಾದ ದೈವಸ್ಥಾನದಲ್ಲಿ ಏಪ್ರಿಲ್ 1ರಿಂದ 5ರವರೆಗೆ ನಡೆಯಬೇಕಿದ್ದ ದೈವಗಳ ಪ್ರತಿಷ್ಠೆ ಮತ್ತು ನಡಾವಳಿ ಕಾರ್ಯಕ್ರಮಗಳನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಶ್ರೀ ಹಳ್ಳತ್ತಾಯ ಮತ್ತು ಪರಿವಾರ ದೈವಗಳು, ಧರ್ಮದೈವ ಶ್ರೀ ರುದ್ರಚಾಮುಂಡಿ, ಗುತ್ತಿನ ದೈವ ಪಿಲಿಚಾಮುಂಡಿ ಸೇರಿದಂತೆ ವರ್ಣಾರ ಪಂಜುರ್ಲಿ, ಸತ್ಯದೇವತೆ, ಗುಳಿಗ ಹಾಗೂ ಕುಟುಂಬದ ದೈವಗಳಾದ ಕಲ್ಲುರ್ಟಿ, ಭೂಮಿಯ ಪಂಜುರ್ಲಿ, ಶ್ರೀ ಶಿರಾಡಿ ದೈವ ಮತ್ತು ಅವರ ಪರಿವಾರ ದೈವಗಳಾದ ಬಿರ್ಮೆರ್, ಪುರುಷ ದೈವ, ಗಿಣಿರಾಮ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಪ್ರತಿಷ್ಠೆ ಮತ್ತು ನಡಾವಳಿ ನಡೆಯಬೇಕಾಗಿತ್ತು.
ಈ ಕುರಿತು ಆದಿಮನೆಯ ಯಜಮಾನರಾದ ರಾಮಕೃಷ್ಣ ಗೌಡ ಕೊರಮೇರು, ಕುಟುಂಬದ ಹಿರಿಯರಾದ ಲಿಂಗಪ್ಪ ಗೌಡ ಕೊರಮೇರು ಮತ್ತು ಕೊರಮೇರು ಕುಟುಂಬದ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





