ಕೊಕ್ಕಡ: ಶ್ರೀನಿಧಿ ಜೀಪ್ ಮಾಲಕ ರಘುನಾಥ ನಾಯ್ಕ್ ನಿಧನ

ಶೇರ್ ಮಾಡಿ

ಕೊಕ್ಕಡ: ಗ್ರಾಮೀಣ ಸಾರಿಗೆ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲ ಅಪಾರ ಸೇವೆ ಸಲ್ಲಿಸಿದ್ದ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ, “ಶ್ರೀನಿಧಿ” ಟೂರಿಸ್ಟ್ ಜೀಪ್‌ನ ಮಾಲಕರಾದ ರಘುನಾಥ ನಾಯ್ಕ್ (72) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಾ. 27ರಂದು ನಿಧನರಾದರು.

ರಘುನಾಥ ನಾಯ್ಕ್ ಅವರು ಗ್ರಾಮೀಣ ಭಾಗದ ಜನರಿಗೆ ವಿಶ್ವಾಸಾರ್ಹ ಸಾರಿಗೆ ಸೇವೆ ನೀಡಿದ ಮುಂಚೂಣಿ ವ್ಯಕ್ತಿಯಾಗಿದ್ದರು. ಸುಮಾರು 40 ವರ್ಷಗಳ ಹಿಂದೆ “ಶ್ರೀನಿಧಿ” ಎಂಬ ಹೆಸರಿನಲ್ಲಿ ಟೂರಿಸ್ಟ್ ಜೀಪ್ ಸೇವೆಯನ್ನು ಪ್ರಾರಂಭಿಸಿದ ಅವರು, ಆರಂಭದಲ್ಲಿ ಕೊಕ್ಕಡದಿಂದ ಉಪ್ಪಿನಂಗಡಿ ಮಾರ್ಗದಲ್ಲಿ ಜನರಿಗೆ ಪ್ರಯಾಣ ಸೌಲಭ್ಯ ಕಲ್ಪಿಸಿದ್ದರು. ಆ ಕಾಲದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಡಿಮೆ ಇದ್ದ ಸಂದರ್ಭದಲ್ಲಿ, ಅವರ ಸೇವೆ ಅನೇಕ ಜನರಿಗೆ ಆಧಾರವಾಗಿತ್ತು.

ನಂತರ ಅವರು ಕೊಕ್ಕಡ – ಧರ್ಮಸ್ಥಳ ಮಾರ್ಗದಲ್ಲಿಯೂ ನಿರಂತರವಾಗಿ ಜೀಪ್ ಸರ್ವಿಸ್ ನೀಡುತ್ತಾ, ಭಕ್ತರು ಹಾಗೂ ಸ್ಥಳೀಯರ ಪ್ರಯಾಣಕ್ಕೆ ಬಹುಮುಖ್ಯ ಸೇತುವೆಯಾಗಿದ್ದರು. ಸಮಯಪಾಲನೆ, ನಿಷ್ಠೆ ಮತ್ತು ಸ್ನೇಹಪರ ಸ್ವಭಾವದಿಂದ ಅವರು ಜನಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು.

ಮೃತರು ಪತ್ನಿ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ. 

Leave a Reply

error: Content is protected !!