ನೆಲ್ಯಾಡಿ ಜೆಸಿಐ ಕೌಶಲ್ಯಾಭಿವೃದ್ಧಿ ಶಿಬಿರ ಸಮಾರೋಪ

ಶೇರ್ ಮಾಡಿ

 

ನೆಲ್ಯಾಡಿ ಜೆಸಿಐ ಕೌಶಲ್ಯಾಭಿವೃದ್ಧಿ ಶಿಬಿರ ಸಮಾರೋಪ

ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕದ ವತಿಯಿಂದ ಆಯೋಜಿಸಲಾದ 6 ದಿನಗಳ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭ ದುರ್ಗಾ ಶ್ರೀ ಟವರ್‌ನಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನೆಲ್ಯಾಡಿ ನೀಡಲ್ಸ್ ಎಂಬ್ರಾಯ್ಡರಿ ವರ್ಕ್ಸ್ ಸಂಸ್ಥೆಯ ಮಾಲಕಿ ಶಶಿನಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸ್ವಂತ ಉದ್ಯಮದ ಮೂಲಕ ಸ್ವಾವಲಂಬನೆ ಸಾಧಿಸುವ ಮಹತ್ವವನ್ನು ಅವರು ವಿವರಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಆರಾಧ್ಯ ಬ್ಯೂಟಿ ಪಾರ್ಲರ್ ಮಾಲಕಿ ಸಂದ್ಯಾ ಅವಿನಾಶ್ ರೈ ಹಾಗೂ ಧನ್ಯ ಅವರನ್ನು ಜೆಸಿಐ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಶಿಬಿರದ ಅವಧಿಯಲ್ಲಿ ಅವರು ನೀಡಿದ ತರಬೇತಿ ಮತ್ತು ಮಾರ್ಗದರ್ಶನಕ್ಕೆ ಘಟಕ ಕೃತಜ್ಞತೆ ಸಲ್ಲಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ನೆಲ್ಯಾಡಿ ಘಟಕದ ಅಧ್ಯಕ್ಷೆ ಪ್ರವೀಣಿ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಜೆಸಿಐನ ಸದಸ್ಯರಾದ ರೇಷ್ಮಾ, ಸುಪ್ರಿತಾ ರವಿಚಂದ್ರ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದು.

ದೀಪಕ್ ಜೆಸಿವಾಣಿ ವಾಚಿಸಿದರು. ಶ್ರೇಯಸ್ ಶೆಟ್ಟಿ ವಂದಿಸಿದರು.

 

Leave a Reply

error: Content is protected !!