





ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕಕ್ಕೆ ವಲಯ ಉಪಾಧ್ಯಕ್ಷರ ಮೊದಲ ಅಧಿಕೃತ ಭೇಟಿ ಕಾರ್ಯಕ್ರಮ ಮಾರ್ಚ್ 26ರಂದು ನಡೆಯಿತು. ಈ ಕಾರ್ಯಕ್ರಮವು ಘಟಕದ ಸಂಘಟನಾ ಶಕ್ತಿಯನ್ನು ಮತ್ತಷ್ಟು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿತು.
ವಲಯ ಉಪಾಧ್ಯಕ್ಷ ಜಿತೇಶ್ ಪಿರೇರ ಅವರು ಘಟಕಕ್ಕೆ ಭೇಟಿ ನೀಡಿ, ಸದಸ್ಯರ ಸಾಮರ್ಥ್ಯವೃದ್ಧಿಗೆ ಸಹಕಾರಿ ಆಗುವಂತೆ ನಾಯಕತ್ವ ಅಭಿವೃದ್ಧಿ ಮತ್ತು ನಿರ್ವಹಣಾ ತರಬೇತಿ (ಎಲ್‌ಡಿಎಂಟಿ) ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ತರಬೇತಿಯ ಮೂಲಕ ನಾಯಕತ್ವ ಗುಣಗಳು, ಸಂಘಟನಾ ನಿರ್ವಹಣಾ ಕೌಶಲ್ಯಗಳು ಹಾಗೂ ವ್ಯಕ್ತಿತ್ವಾಭಿವೃದ್ಧಿ ಕುರಿತು ಅವರು ವಿವರವಾಗಿ ತಿಳಿಸಿದರು. ಜೊತೆಗೆ ಘಟಕದ ಮುಂದಿನ ಬೆಳವಣಿಗೆಗೆ ಅಗತ್ಯವಾದ ಮಹತ್ವದ ಸಲಹೆಗಳು ಮತ್ತು ಮಾರ್ಗದರ್ಶನವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ನೆಲ್ಯಾಡಿ ಘಟಕದ ಅಧ್ಯಕ್ಷೆ ಜೆಸಿ ಪ್ರವೀಣಿ ಶೆಟ್ಟಿಯವರು ವಹಿಸಿದ್ದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಲೇಡಿ ಜೇಸಿ ಅಧ್ಯಕ್ಷೆ ನವ್ಯ ಪ್ರಸಾದ್, ಪೂರ್ವ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು
ನಮಿತಾ ಜೆಸಿ ವಾಣಿ ವಾಚಿಸಿದರು. ನೂತನ ಸದಸ್ಯರಾಗಿ ಜೆಸಿಐ ನೆಲ್ಯಾಡಿ ಘಟಕಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಈಡನ್ ಗಾರ್ಡನ್ ಶಾಲೆಯ ಶಿಕ್ಷಕ ಝಂನೈದ್ ಕೋಲ್ಪೆ ಅವರ ಪರಿಚಯವನ್ನು ದೀಪಿಕಾ ವಾಚಿಸಿದರು. ವಲಯ ಉಪಾಧ್ಯಕ್ಷ ಜಿತೇಶ್ ಪಿರೇರ ಅವರು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಶ್ರೇಯಸ್ ಶೆಟ್ಟಿ ವಂದಿಸಿದರು




