





ಬಂಟ್ವಾಳ : ವಿದ್ಯುತ್ ತಂತಿ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ನೇರಳಕಟ್ಟೆ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿರುವ ಶರೀಫ್ ಅವರ ಪುತ್ರ ಶಹೀರ್ (15)ಮೃತಪಟ್ಟ ಬಾಲಕ.
ಪುತ್ತೂರು ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದ ಈತ ಶಾಲೆಗೆ ರಜೆಯ ಹಿನ್ನಲೆಯಲ್ಲಿ ಸಮೀಪದ ಗಡಿಯಾರದಲ್ಲಿರುವ ಅಜ್ಜನ ಮನೆಗೆ ತೆರಳಿದ್ದ. ಶನಿವಾರ ಬೆಳಿಗ್ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಶಹೀರ್ ಮೃತಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಶಹೀರ್ ತಂದೆ, ತಾಯಿ, ತಮ್ಮ, ಇಬ್ಬರು ಸಹೋದರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾನೆ.




