ಧರ್ಮಸ್ಥಳ ಫೀಡರ್‌ನಲ್ಲಿ ತುರ್ತು ಕಾಮಗಾರಿ: ಮೇ 27ರಂದು ವಿದ್ಯುತ್ ವ್ಯತ್ಯಯ

ಶೇರ್ ಮಾಡಿ

 

ಧರ್ಮಸ್ಥಳ ಫೀಡರ್‌ನಲ್ಲಿ ತುರ್ತು ಕಾಮಗಾರಿ: ಮೇ 27ರಂದು ವಿದ್ಯುತ್ ವ್ಯತ್ಯಯ

ಉಜಿರೆ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ (ಮೆಸ್ಕಾಂ) ವತಿಯಿಂದ ಬೆಳ್ತಂಗಡಿ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಧರ್ಮಸ್ಥಳ 33/11 ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಸಂಪರ್ಕ ಹೊಂದಿರುವ 33 ಕೆವಿ ಧರ್ಮಸ್ಥಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಮೇ 27ರಂದು ಬುಧವಾರ ಬೆಳಿಗ್ಗೆ 10:30ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ ವಿವಿಧ 11 ಕೆವಿ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ ಆಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗ ಉಜಿರೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:ಧರ್ಮಸ್ಥಳ ಪೇಟೆ,ಕನ್ಯಾಡಿ,ಪುದುವೆಟ್ಟು,ಕಳಂಜ, ಶಿಶಿಲ, ಶಿವಾಜೆ, ಪಟ್ರಮೆ, ಕೊಕ್ಕಡ, ಅರಸಿನಮಕ್ಕಿ, ಹತ್ಯಡ್ಕ, ರೆಖ್ಯಾ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿರುವುದರಿಂದ ಗ್ರಾಹಕರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

 

Leave a Reply

error: Content is protected !!