ನೆಲ್ಯಾಡಿ ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲಾ ಪ್ರಾರಂಭೋತ್ಸವ

ಶೇರ್ ಮಾಡಿ

 

ನೆಲ್ಯಾಡಿ: ನೆಲ್ಯಾಡಿ ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.

ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಕಲಂದರ್ ಷಾ ಸಹದಿ ಅವರು ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ಎಲ್‌ಕೆಜಿ ತರಗತಿಗೆ ಹೊಸದಾಗಿ ದಾಖಲಾದ ಪುಟಾಣಿ ಮಕ್ಕಳಿಗೆ ಉಸ್ತಾದರು ಕೈಹಿಡಿದು ಮೊದಲ ಅಕ್ಷರ ಬರೆಯುವ ಮೂಲಕ ವಿದ್ಯಾರಂಭ ನೆರವೇರಿಸಿದರು. ಇದೇ ವೇಳೆ ಮಕ್ಕಳಿಗೆ ಹೊಸ ಶೈಕ್ಷಣಿಕ ವರ್ಷದ ಶುಭಾಶಯಗಳನ್ನು ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಸೀಮಾ ಡೆನ್ನೀಸ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಶಾಲಾ ನಾಯಕಿ ನೀಹಾ ಫಾತೀಮಾ ಅವರು ಹೊಸ ಶೈಕ್ಷಣಿಕ ವರ್ಷದ ಮಹತ್ವದ ಕುರಿತು ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ನಾಝೀಂ ಸಾಹೇಬ್, ಉಪಾಧ್ಯಕ್ಷ ಅಬ್ದುಲ್ ರಝಾಕ್, ಕಾರ್ಯದರ್ಶಿ ಸಿದ್ದೀಕ್ ಎಂ., ಸದಸ್ಯರಾದ ಉಮ್ಮರ್ ತಾಜ್, ಸುಲೈಮಾನ್ ಎನ್.ಎಸ್., ಶಕೀರ್, ರಫೀಕ್ ಅಲಂಪಾಡಿ, ಬದ್ರಿಯಾ ಜಮಾ ಮಸೀದಿಯ ಉಪಕಾರ್ಯದರ್ಶಿ ಇಲ್ಯಾಸ್, ನುಸುರತುಲ್ ಮಸಾಕೀಲ್ ಅಧ್ಯಕ್ಷ ಹಮೀದ್ ಡೀಲಕ್ಸ್, ಸದರ್ ಉಸ್ತಾದ್ ಇಸ್ಮಾಯಿಲ್ ಸಹದಿ, ಅಸೀಫ್ ಮುಹೀನಿ ಉಸ್ತಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪೋಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಮೆರುಗು ತಂದರು. ಬಳಿಕ ಎಲ್ಲಾ ಮಕ್ಕಳಿಗೆ ಸಿಹಿತಿಂಡಿ ಹಾಗೂ ಪಾನೀಯ ವಿತರಿಸಲಾಯಿತು.

ಫಾಯೀಝಾ ಕಾರ್ಯಕ್ರಮವನ್ನು ನಿರೂಪಿಸಿದರು, ಶಿಕ್ಷಕಿ ಸಹನೀಯಾ ವಂದಿಸಿದರು.

 

Leave a Reply

error: Content is protected !!