ನೇಸರ ನ2: ನೆಲ್ಯಾಡಿಯ ಸಂತ ಗ್ರಿಗೋರಿಯೋಸ್ ಆರ್ಥೊಡಕ್ಸ್ ಸೆರಿಕ್ ಚರ್ಚ್‍ನಲ್ಲಿ ಸಂತನಾಗಿ ನೊಂದವರ ಬಾಳಿಗೆ ಬೆಳಕಾಗಿ, ಕೇರಳದಾದ್ಯಂತ ಜಿಸಸ್‍ನ ಧರ್ಮ ಸಂದೇಶವನ್ನು ಸಾರಿದ ಮಹಾನ್ ಸಂತ ಗ್ರಿಗೋರಿಯೋಸ್‍ರವರ 119ನೇ ಸ್ಮರಣೆಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿಕಾರ್ ರೇ|ಪಾ| ವರ್ಗೀಸ್ ತೋಮಸ್‍ರವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಗಳೊಂದಿಗೆ ಕಾರ್ಯಕ್ರಮ ನಡೆಯಿತು. ದಿನಾಂಕ 31/10/2021ನೇ ಆದಿತ್ಯವಾರ ಪವಿತ್ರಪೂಜೆಯ ನಂತರ ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡು ದಿನಾಂಕ 01/11/2021 ನೇ ಸೋಮವಾರ ಹಾಗೂ 02/11/2021 ನೇ ಮಂಗಳವಾರದ ವರೆಗೆ ವಿಶೇಷವಾಗಿ ಹಬ್ಬದ ಆಚರಣೆ ನಡೆಸಲಾಯಿತು.
ವೈದಿಕ ವಿಧಿಗಳನ್ನು ಮುಖ್ಯ ಕಾರ್ಮಿಕರಾಗಿ ವೇರಿ|ರೇ| ಜಿ.ಎಮ್ ಸ್ಕರೀಯಾ ರಂಬಾನ್ ರವರು ವಹಿಸಿದ್ದು, ವೇರಿ|ರೇ|ವಿ.ಸಿ.ಮನಿಕೋರ್ ಎಪ್ಸಿಸ್ಕೋಪ್, ರೇ|ಪಾ|ಮ್ಯಾಥ್ಯು ಜಾನ್, ರೇ|ಪಾ| ಮ್ಯಾಥ್ಯು ಜಾನ್, ರೇ|ಪಾ| ಪೌಲ್ ಜೇಕಬ್, ರೇ|ಪಾ|ಜಕಾರಿಯಾ ಮ್ಯಾಥ್ಯು, ಪಾ| ವರ್ಗೀಸ್.ಪಿ.ಎ, ಪಾ|ಪಿಲೀಪ್ ತೋಮಸ್, ಪಾ|ಮೆಲ್‍ವಿನ್ ಮ್ಯಾಥ್ಯೂ ಒಐಸಿ, ಪಾ|ತೋಮಸ್ ಬಿಜಿಲಿ ಒಐಸಿ, ಪಾ|ಸತ್ಯನ್ ತೋಮಸ್ ಒಐಸಿ ಮೊದಲಾದ ಧರ್ಮಗುರುಗಳ ಸಹ ಕಾರ್ಮಿಕತ್ವದಲ್ಲಿ ಪವಿತ್ರ ಬಲಿ ಪೂಜೆ ಜರಗಿದ್ದು. ಪವಿತ್ರ ಮೆರವಣಿಗೆ ಆಶೀರ್ವಾದದೊಂದಿಗೆ ಹಬ್ಬವನ್ನು ಮುಕ್ತಾಯಗೊಳಿಸಲಾಯಿತು. ಚರ್ಚ್‍ನ ಟ್ರಸ್ಟಿ ಯಂ.ಟಿ.ಜಾನ್, ಕಾರ್ಯದರ್ಶಿ ಜೋಲಿ ಜಾರ್ಜ್, ಸದಸ್ಯರಾದ ಎನ್.ಜಾನ್, ಕೆ.ಪಿ.ಅಬ್ರಹಾಂ, ಕೆ.ಎಮ್.ತೋಮಸ್, ಸಿಜುವರ್ಗೀಸ್, ರಾಜುವರ್ಗೀಸ್, ವಿನು.ಟ.ಎ, ಲಿಜೋವರ್ಗೀಸ್ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು. ಭಕ್ತರು ಆಗಮಿಸಿ ಮದ್ಯಸ್ಥಿಕೆಯನ್ನು ಯಾಚಿಸಿ ದೇವರ ಕೃಪೆಗೆ ಪಾತ್ರರಾದರು.