ನೇಸರ ನ2: ಕೊಣಾಲು-ನೆಲ್ಯಾಡಿ ಸೈಂಟ್ ತೋಮಸ್ ಜಾಕೋಬೈಟ್ ಸೀರಿಯನ್ ಚರ್ಚ್ ದೇವಾಲಯದ ಆಶ್ರಯದಲ್ಲಿ ಸ್ಥಾಪಿಸಲ್ಪಟ್ಟ ಮೋರ್ ಗ್ರಿಗೋರಿಯೋಸ್ ಕೊಪ್ಪದ ಚಾಪೆಲ್ ªನಲ್ಲಿ ಅಕ್ಟೋಬರ್ 31 ರಿಂದ ಅರಂಭಗೊಂಡು ನವಂಬರ್ 02 ರವರೆಗೆ ಕೇರಳಾದದ್ಯಂತ ಕ್ರೆಸ್ತಧರ್ಮವನ್ನು ಪಸರಿಸಿದ, ಜಿಸಸ್‍ನ ದ್ಯೇಯೋದ್ದೇಶಗಳನ್ನು ಚಾಚುತಪ್ಪದೆ ಪಾಲಿಸಿದ, ಬಡವರ, ದೀನ ದಲಿತರ, ನೊಂದವರ ಧ್ವನಿಯಾಗಿ ಮಹಾನ್ ಸಂತ ಪದವಿಯನ್ನು ಪಡೆದ ಮೋರ್ ಗ್ರಿಗೋರಿಯೋಸ್ ತಿರುಮೇನಿಯವರ 119ನೇ “ಓರ್ಮಪೆರುನ್ನಾಳ್” ಹಬ್ಬವು ಸಮಸ್ತ ಕ್ರೈಸ್ತ ಬಾಂಧವರ ಉಪಸ್ಥಿತಿಯಲ್ಲಿ ವೈದಿಕರ ಪುಣ್ಯ ಘೋಷಗಳೊಂದಿಗೆ ಭಕ್ತಿ ಶ್ರಧ್ಧೆಯಿಂದ ನಡೆಯಿತು.
ಕೇರಳದ ಬಡಕುಟುಂಬದಲ್ಲಿ ಹುಟ್ಟಿ ಸಂತಪದವಿಯನ್ನು ಪಡೆದ ಸಂತ ಗ್ರಿಗೋರಿಯಸ್‍ರವರ ಕೊಪ್ಪದಲ್ಲಿ ಸ್ಥಾಪಿತವಾದ ಪುಣ್ಯಕ್ಷೇತದಲ್ಲ್ರಿ. ಸಂತಾನ ಹೀನರಿಗೆ ಸಂತಾನದ ಭಾಗ್ಯ, ಅಂಧರ ಬಾಳಿಗೆ ಬೆಳಕನ್ನು ನೀಡುವ ಕ್ಷೇತ್ರ, ಕಳ್ಳತನದಂತಹ ಪ್ರಕರಣಗಳಿಗೆ ತಕ್ಷಣವೇ ಕುರುವು ನೀಡುವ ಪುಣ್ಯಕ್ಷೇತ್ರವಾಗಿ ಜನಜನಿತವಾಗಿದೆ. ಜಾತಿ, ಮತ ಬೇದವಿಲ್ಲದೆ ಶ್ರದ್ಧೆಯಿಂದ ಪೂಜ್ಯರ ಅನುಗ್ರಹಕ್ಕಾಗಿ ಸಾವಿರಾರು ಜನ ಸೇರಿದ್ದರು. ಪೂಜ್ಯರ ಆರಾಧನೆಯ ಪುಣ್ಯ ಕಾರ್ಯಕ್ರಮವು ಅಕ್ಟೋಬರ್ 31 ರಂದು ಕ್ಷೇತ್ರದ ಧರ್ಮಗುರು ವಿಕಾರಿ ಫಾ|ಬಿನುಜೋಸೆಫ್‍ರವರ ನೇತೃತ್ವದಲ್ಲಿ ಸಂತರ ಪ್ರಾರ್ಥನೆ, ಧ್ವಜಾರೋಹಣದೊಂದಿಗೆ ಆರಂಭಗೊಂಡು ದಿನಾಂಕ 01-11-2021 ನೇ ಸೋಮವಾರದಂದು ಬೆಳ್ಳಿಗೆ ಪ್ರಭಾತ ನಮಸ್ಕಾರ, ಪ್ರಾರ್ಥನಾದಿಗಳು ನಡೆದು ಸಂಜೆ ಕೊಣಾಲಿನ ಮಾತೃ ದೇವಾಲಯದಲ್ಲಿ ವಾಹನ ಪೂಜಾದಿಗಳು ನಡೆದವು ನಂತರ ವಾಹನ ಜಾಥದೊಂದಿಗೆ ಕೊಪ್ಪದ ಚಾಪಲಿನ್‍ನವರೆಗೆ ವೈಭವದ ಮೆರವಣಿಗೆ ನಡೆಯಿತು, ನಂತರ ಕೊಪ್ಪದ ಚಾಪಲಿನ್‍ನಲ್ಲಿ ಪೂಜಾದಿಗಳು ನಡೆದವು. ದಿನಾಂಕ 02-11-2021 ನೇ ಮಂಗಳವಾರ ವಿವಿಧ ಪೂಜೆಗಳು, ಮದ್ಯಸ್ಥ ಪ್ರಾರ್ಥನೆಯೊಂದಿಗೆ ಅಶೀರ್ವಾದದಿಗಳು ನಡೆದು ಭೋಜನ ಕೂಟದೊಂದಿಗೆ ಸಮಾಪನೆಗೊಂಡಿತು. ಧರ್ಮಗುರು ವಿಕಾರಿ ಫಾ| ಬಿನು ಜೋಸೆಫ್‍ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೆ|ಫಾ ಅನೀಶ್ ಪಾರಾಚೇರಿ, ಸೈಂಟ್ ಮೇರೀಸ್ ಸೊನೋರೋ ಚರ್ಚ್ ಮೀನಂಗಾಡಿ ಯವರು ನಡೆಸಿಕೊಟ್ಟರು. ರೆ|ಫಾ| ಜಾನ್ ವರ್ಗೀಸ್ ಕೋರ್ ಎಪಿಸ್ಕೋಪ್, ರೆ|ಫಾ|ಜಿಜನ್ ಅಬ್ರಹಾಂ, ರೆ|ಫಾ|ವಿಲ್ಸನ್, ರೆ|ಫಾ| ಅನುಪ್‍ರವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಚರ್ಚ್‍ನ ಕಾರ್ಯದರ್ಶಿ ಇ.ಜಿ. ಫೌಲೋಸ್, ಖಜಾಂಚಿ ಮಧು.ಎ.ಜೆ, ಜೊತೆಕಾರ್ಯದರ್ಶಿ ಪ್ರಜ್ವಲ್.ಕೆ.ಪಿ, ಸದಸ್ಯರುಗಳಾದ ವರ್ಗೀಸ್ ಕೆ.ಸಿ ಕಲ್ಯಾಟ್, ಎ.ಎ ಅಬ್ರಹಾಂ, ಕೆ.ಸಿ.ವರ್ಗೀಸ್, ಟಿ.ಸಿ.ಅಬ್ರಹಾಂ,ಕುರಿಯ್ಚನ್.ಎಮ್.ಸಿ, ಉಷಾಜೋಯಿ, ಸೈಜನ್,ಕೆ.ಎ, ಬೈಜು ವಿ.ವಿ, ಎಮ್.ಎಸ್ ಬಿಜು, ಬಿನುವರ್ಗೀಸ್, ಸಂದೀಪ್.ಪಿ.ಕೆ, ಶಿಬು ಮಡತಿಲೇತ್ ಮೊದಲಾದವರು ಹಾಜರಿದ್ದರು, ನೂರಾರು ಭಕ್ತರು ಹೊರೆಕಾಣಿಕೆಗಳನ್ನು ಸಲ್ಲಿಸಿ ಸಂತರ ಪವಿತ್ರ ಬಲಿಪೂಜೆ, ಮೆರೆವಣಿಗೆಗಳಲ್ಲಿ ಪಾಲ್ಕೊಂಡು ಪರಮಪೂಜ್ಯರ ಮದ್ಯಸ್ಥಿಕೆಯನ್ನು ಯಾಚಿಸಿ ಸಂತರಕೃಪೆಗೆ ಪಾತ್ರರಾದರು.