ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆ 13ನೇ ವರ್ಷಕ್ಕೆ ಪಾದಾರ್ಪಣೆ, ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ

ಶೇರ್ ಮಾಡಿ

 

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆ 13ನೇ ವರ್ಷಕ್ಕೆ ಪಾದಾರ್ಪಣೆ, ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ

ನೆಲ್ಯಾಡಿ: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಿತ, ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಬಿಲ್ಡಿಂಗ್‍ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆಯು ಯಶಸ್ವಿ 13ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಆ ಪ್ರಯುಕ್ತ ಜೂ.8ರಂದು ಬೆಳಗ್ಗೆ ನೆಲ್ಯಾಡಿ ಡೆಂಜ ಕಾಂಪ್ಲೆಕ್ಸ್ ನಲ್ಲಿರುವ ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು.

ಅರ್ಚಕ ಶ್ರೀಧರ ನೂಜಿನ್ನಾಯ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಸಂಘವು ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಬಿಲ್ಡಿಂಗ್‍ನಲ್ಲಿ ಪ್ರಧಾನ ಕಚೇರಿ ಹೊಂದಿದ್ದು ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಪುತ್ತೂರು ಎಸ್‍ಎಂಟಿ, ಕಾಣಿಯೂರು, ಬೆಳ್ಳಾರೆ, ವಿಟ್ಲದಲ್ಲಿ ಶಾಖೆ ಹೊಂದಿದೆ. ನೆಲ್ಯಾಡಿ ಶಾಖೆಯು 2025-26ನೇ ಸಾಲಿನಲ್ಲಿ 73 ಕೋಟಿ ರೂ.ವ್ಯವಹಾರ ನಡೆಸಿದೆ. 2.48 ಕೋಟಿ ರೂ.ಠೇವಣಿ ಸಂಗ್ರಹ, 2.25 ಕೋಟಿ ರೂ.ಸಾಲ ವಿತರಣೆ ಮಾಡಿದೆ. 98.52 ಶೇ. ಸಾಲ ವಸೂಲಾತಿಯೂ ಆಗಿದೆ. ಸಂಘದ ಎಲ್ಲಾ ಶಾಖೆಗಳಿಗೆ ಪೈಪೋಟಿ ಕೊಡುವ ಶಾಖೆಯಾಗಿ ನೆಲ್ಯಾಡಿ ಶಾಖೆ ಬೆಳೆದಿದೆ ಎಂದು ಹೇಳಿದರು. 2002ರಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಆರಂಭಗೊಂಡಿದ್ದು ಪ್ರಸ್ತುತ 8200 ಸದಸ್ಯರಿದ್ದು ರೂ.5 ಕೋಟಿಗೂ ಮಿಕ್ಕಿ ಪಾಲು ಬಂಡವಾಳವಿದೆ. ಸಂಘವು 2025-26ನೇ ಸಾಲಿನಲ್ಲಿ 881 ಕೋಟಿ ರೂ.ವ್ಯವಹಾರ ನಡೆಸಿದೆ. ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪ್ರಯತ್ನದಿಂದ ಶೇ.99ರಷ್ಟು ಸಾಲ ವಸೂಲಾತಿಯೂ ಆಗಿದೆ. ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ ಎಂದು ಹೇಳಿದರು.

ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ ಗೌಡ ಪಾನತ್ತಿಲ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಸಂಘದ ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ಸತೀಶ್ ಪಾಂಬಾರ್, ತೇಜಸ್ವಿನಿ ಕಟ್ಟಪುಣಿ, ಸಂಘದ ನಿರ್ದೇಶಕರೂ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಅಧ್ಯಕ್ಷರೂ ಆದ ಪ್ರವೀಣ್ ಕುಂಟ್ಯಾನ, ಸಂಘದ ನಿರ್ದೇಶಕರೂ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಉಪಾಧ್ಯಕ್ಷರೂ ಆದ ಸುಪ್ರೀತಾ ರವಿಚಂದ್ರ ಹೊಸವಕ್ಲು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ., ನೆಲ್ಯಾಡಿ ಶಾಖಾ ಮ್ಯಾನೇಜರ್ ತೇಜಸ್ವಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಮಾಜಿ ನಿರ್ದೇಶಕರಾದ ಚಂದ್ರಶೇಖರ ಗೌಡ ಬ್ರಂತೋಡು, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಸದಸ್ಯರೂ, ಮಾಜಿ ನಿರ್ದೇಶಕರೂ ಆದ ನಾಗೇಶ್ ನಳಿಯಾರ್, ಪುತ್ತೂರು ಟೌನ್ ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀಧರ ಗೌಡ ಕಣಜಾಲು, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಸದಸ್ಯರಾದ ಸುಂದರ ಗೌಡ ಅತ್ರಿಜಾಲು, ರಾಧಾಕೃಷ್ಣ ಗೌಡ ಕೆರ್ನಡ್ಕ, ತುಕ್ರಪ್ಪ ಗೌಡ ಗೋಳಿತ್ತೊಟ್ಟು, ನೋಣಯ್ಯ ಗೌಡ ಡೆಬ್ಬೇಲಿ, ಡೊಂಬಯ್ಯ ಗೌಡ ಶಿರಾಡಿ, ಸುಲತ ಮೋಹನಚಂದ್ರ, ಜಿನ್ನಪ್ಪ ಪೊಸೊಳಿಕೆ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ರವಿಚಂದ್ರ ಹೊಸವಕ್ಲು, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ಕಟ್ಟಡದ ಮಾಲಕರಾದ ಪುರಂದರ ಗೌಡ ಡೆಂಜ, ಶಿವ ಎಲೆಕ್ಟ್ರಿಕಲ್ಸ್ ನ ಪ್ರಶಾಂತ್, ನೆಲ್ಯಾಡಿ ಶಾರದಾ ಫ್ಯಾನ್ಸಿ ಮಾಲಕ ಜಯಕುಮಾರ್, ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಸಿಬ್ಬಂದಿಗಳಾದ ಪ್ರದೀಶ್ ಯನ್., ನಿತೀಶ್, ಎಸ್‍ಸಿಡಿಸಿಸಿ ಬ್ಯಾಂಕ್ ನೆಲ್ಯಾಡಿ ಶಾಖಾ ಸಿಬ್ಬಂದಿಗಳಾದ ವಿಕಾಸ್, ಅನಿತಾ, ಶೈನೀಶ್, ಪದ್ಮನಾಭ, ವಿನಾಯಕ ಸ್ಟೋರ್ ಮನೋಜ್, ಗ್ರಾ.ಪಂ.ಮಾಜಿ ಸದಸ್ಯೆ ಶೋಭಾಲತಾ, ಗ್ರಾಹಕರಾದ ಪ್ರವೀಣ್, ರಾಮಣ್ಣ ಗೌಡ ನೆಲ್ಯಾಡಿ, ಬಾಲಪ್ಪ ಗೌಡ ಅಗರ್ತ, ಬಾಬು ಪೂಜಾರಿ ಗೋಳಿತ್ತೊಟ್ಟು, ದಿನೇಶ್ ಗೌಡ ಕೋಲ್ಪೆ, ಶೀನಪ್ಪ ಗೌಡ ರಾಮನಗರ, ಗುಮ್ಮಣ್ಣ ಗೌಡ ಪುಚ್ಚೇರಿ, ಪೂವಪ್ಪ ಗೌಡ ಇಚ್ಚೂರು, ಲಲಿತಾ, ವಾಮನ ಗೌಡ, ವಿಶ್ವನಾಥ ಗೌಡ, ದಯಾನಂದ, ಮೋಹನ, ವೆಂಕಪ್ಪ ಗೌಡ ಗೋಳಿತ್ತೊಟ್ಟು, ಧನಂಜಯ ಅಲೆಕ್ಕಿ ಸಹಿತ ಹಲವು ಮಂದಿ ಭೇಟಿ ನೀಡಿ ಶುಭಕೋರಿದರು.

ಸಂಘದ ಎಪಿಎಂಸಿ ಶಾಖಾ ಮ್ಯಾನೇಜರ್ ವಿನೋದ್‍ರಾಜ್, ಸಿಬ್ಬಂದಿ ಯಶ್ವಿತ್ ಹೆಚ್., ಕಡಬ ಶಾಖಾ ಮ್ಯಾನೇಜರ್ ಶಿವಪ್ರಸಾದ್ ಎ., ನೆಲ್ಯಾಡಿ ಶಾಖಾ ಸಿಬ್ಬಂದಿಗಳಾದ ವಿಜಯಕುಮಾರ್, ಅಜಿತ್ ಬಿ.ಕೆ., ಪಿಗ್ಮಿ ಸಂಗ್ರಾಹಕರಾದ ಶಿವಪ್ರಸಾದ್, ತೀರ್ಥೇಶ್ವರ ಸಹಕರಿಸಿದರು. ಪ್ರವೀಣ್ ಕುಂಟ್ಯಾನ ಸ್ವಾಗತಿಸಿದರು. ನೆಲ್ಯಾಡಿ ಶಾಖಾ ಸಲಹಾ ಸಮಿತಿ ಸದಸ್ಯ ಸುರೇಶ್ ಪಡಿಪಂಡ ವಂದಿಸಿದರು.

 

Leave a Reply

error: Content is protected !!