ನೆಲ್ಯಾಡಿ: ಆಲಂತಾಯ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಶೇರ್ ಮಾಡಿ

 

ನೆಲ್ಯಾಡಿ: ಆಲಂತಾಯ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ನೆಲ್ಯಾಡಿ: ಆಲಂತಾಯ ಸರಕಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರ್ನಾಟಕ ಅರಣ್ಯ ಇಲಾಖೆ ಮ0ಗಳೂರು ವಿಭಾಗ ಸುಬ್ರಹ್ಮಣ್ಯ ಉಪ ವಿಭಾಗ ಪ0ಜ ಅರಣ್ಯ ವಲಯದ ಸಹಕಾರದೊಂದಿಗೆ ವನಮಹೋತ್ಸವ ಆಚರಿಸಲಾಯಿತು.

ಉಪವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಕೆ., ಗಸ್ತು ಅರಣ್ಯಪಾಲಕರಾದ ಸಂತೋಷ, ಸುಶಾಂತ್, ಅರಣ್ಯ ವೀಕ್ಷಕ ಜನಾರ್ದನ್ ಅವರು ಭಾಗವಹಿಸಿ ಪರಿಸರ ಸಂರಕ್ಷಣೆ, ಅರಣ್ಯಗಳ ಮಹತ್ವ ಹಾಗೂ ಮರಗಳ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಅಶೋಕ ಸಿ.ಬಿ. ಅಧ್ಯಕ್ಷತೆ ವಹಿಸಿದ್ದರು.

ಶಾಲೆಯ ಮುಖ್ಯಶಿಕ್ಷಕಿ ಲವ್ಲೀ ಜೋಸ್, ಅಂಗನವಾಡಿ ಕಾರ್ಯಕರ್ತೆ ರಾಜೀವಿ, ಎಸ್.ಡಿ.ಎಂ.ಸಿ. ಸದಸ್ಯರಾದ ಈಶ್ವರ ಭಟ್, ಶಿಕ್ಷಕ ರಮೇಶ್ ದೊಡವಾಡ, ಅತಿಥಿ ಶಿಕ್ಷಕಿಯರಾದ ನವ್ಯಶ್ರೀ, ಶಶಿಕಲಾ ಅಲಂಗಪ್ಪೆ, ದೀಕ್ಷಿತಾ, ವಿದ್ಯಾ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಅಡುಗೆ ಸಿಬ್ಬಂದಿ ಲಲಿತಾ, ಸಹಾಯಕ ಸಿಬ್ಬಂದಿ ಭವಾನಿ, ಪೆÇೀಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಸ್ವೀಕರಿಸಿ, ಮರಗಳನ್ನು ಬೆಳೆಸಿ ಪೆÇೀಷಿಸುವ ಸಂಕಲ್ಪ ಮಾಡಿದರು.

 

Leave a Reply

error: Content is protected !!