ಎಸ್‌ಕೆಎಸ್ ಸಮೂಹ ಸಂಸ್ಥೆಯ ಮೂಲಕ ಉದ್ಯಮಿ ಎ.ಸಿ.ಕುರಿಯನ್ ನೆರವು








ನೆಲ್ಯಾಡಿ: ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಗೆ ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಊಟದ ತಟ್ಟೆಗಳು ಮತ್ತು ನೋಟ್‌ಬುಕ್‌ಗಳನ್ನು ಉದ್ಯಮಿ ಎ.ಸಿ.ಕುರಿಯನ್ ಅವರು ತಮ್ಮ ಎಸ್‌ಕೆಎಸ್ ಸಮೂಹ ಸಂಸ್ಥೆಯ ಮೂಲಕ ಕೊಡುಗೆಯಾಗಿ ನೀಡಿದರು.
ಸಂಸ್ಥೆಯ ಸಿಬ್ಬಂದಿ ಹಾಗೂ ಶಾಲೆಯ ಪೂರ್ವ ವಿದ್ಯಾರ್ಥಿಯಾದ ಹರೀಶ್ ಅವರ ಮೂಲಕ ವಿದ್ಯಾರ್ಥಿಗಳಿಗೆ ಈ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯ ಜಬ್ಬಾರ್ ಹಾಗೂ ಜನಾರ್ದನ ಪಟ್ಟೇರಿ, ಶಾಲೆಯ ಮುಖ್ಯಶಿಕ್ಷಕ ಶ್ರೀಧರ್ ಕೆ.ಎಸ್. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಎಲ್‌ಕೆಜಿ–ಯುಕೆಜಿ ವಿಭಾಗದ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ಹಾಗೂ ದೈನಂದಿನ ಅಗತ್ಯಗಳಿಗೆ ನೆರವಾಗುವ ಉದ್ದೇಶದಿಂದ ನೀಡಲಾದ ಈ ಕೊಡುಗೆಯನ್ನು ಶಾಲಾ ಸಮುದಾಯವು ಹರ್ಷದಿಂದ ಸ್ವಾಗತಿಸಿತು. ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಉದ್ಯಮಿ ಎಸ್ ಕೆ ಎಸ್ ಸಮೂಹ ಸಂಸ್ಥೆಯ ಎ ಸಿ ಕುರಿಯನ್ ಅವರಿಗೆ ಕೃತಜ್ಞತೆ ಸಲ್ಲಿಸಿಲಾಯಿತು.



