ಸವಣೂರು ವಲಯ ಭಜನಾ ಪರಿಷತ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

ಶೇರ್ ಮಾಡಿ

ಅಧ್ಯಕ್ಷರಾಗಿ ಚಂದ್ರಶೇಖರ್ ಮೆದು, ಕಾರ್ಯದರ್ಶಿಯಾಗಿ ರಾಕೇಶ್ ಆಚಾರ್ಯ ಬನಾರಿ, ಕೋಶಾಧಿಕಾರಿಯಾಗಿ ಶ್ರೀಧರ ಸುನ್ನಾಜೆ 

 

ಸವಣೂರು ವಲಯ ಭಜನಾ ಪರಿಷತ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

ಸವಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಕಡಬ ತಾಲೂಕಿನ ಸವಣೂರು ವಲಯದ ಭಜನಾ ಪರಿಷತ್ ಸಭೆಯು ಸವಣೂರಿನ ಯುವ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಭಜನಾ ಮಂಡಳಿಗಳ ಕಾರ್ಯಚಟುವಟಿಕೆಗಳು ಹಾಗೂ ಸದಸ್ಯರ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.

ಸವಣೂರು ವಲಯ ಭಜನಾ ಪರಿಷತ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

ಸಭೆಯಲ್ಲಿ ಭಜನಾ ಪರಿಷತ್‌ನ ಅಧ್ಯಕ್ಷರಾಗಿ ಚಂದ್ರಶೇಖರ್ ಮೆದು, ಉಪಾಧ್ಯಕ್ಷರಾಗಿ ಶಾರದಾ ಕುವೆತೊಡಿ, ಕಾರ್ಯದರ್ಶಿಯಾಗಿ ರಾಕೇಶ್ ಆಚಾರ್ಯ ಬನಾರಿ, ಜೊತೆ ಕಾರ್ಯದರ್ಶಿಯಾಗಿ ಸುನೀತಾ ಗಣೇಶ್ ಹಾಗೂ ಕೋಶಾಧಿಕಾರಿಯಾಗಿ ಶ್ರೀಧರ ಸುನ್ನಾಜೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದೇ ವೇಳೆ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನೂ ನೇಮಕಗೊಳಿಸಲಾಯಿತು.

ಸಭೆಯಲ್ಲಿ ಭಜನಾ ಮಂಡಳಿಗಳ ಸದಸ್ಯರು ತಮ್ಮ ಅನಿಸಿಕೆಗಳು ಹಾಗೂ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು. ಭಜನಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂಘಟಿಸುವುದು ಹಾಗೂ ಸದಸ್ಯರ ನಡುವಿನ ಸಮನ್ವಯವನ್ನು ಬಲಪಡಿಸುವ ಕುರಿತು ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ಕಡಬ ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಭಜನಾ ಪರಿಷತ್ ಕಾರ್ಯದರ್ಶಿ ದಿವೀಶ್ ನಾವೂರು, ತಾಲೂಕು ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಮಹೇಶ್ ಕೆ, ಸವಣೂರು ವಲಯ ಜನಜಾಗೃತಿ ವೇದಿಕೆ ಸದಸ್ಯ ಗಿರಿಶಂಕರ ಸುಲಾಯ, ಮೇಲ್ವಿಚಾರಕಿ ಹೇಮಲತಾ ಶೆಟ್ಟಿ, ಸೇವಾಪ್ರತಿನಿಧಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ಸಭೆಯ ಯಶಸ್ಸಿಗೆ ಸಹಕರಿಸಿದರು.

 

Leave a Reply

error: Content is protected !!