ಕಡಬ: ಜನಮಂಗಳ ಯೋಜನೆಯಡಿ ವೀಲ್‌ಚೇರ್ ವಿತರಣೆ

ಶೇರ್ ಮಾಡಿ

 

ಕಡಬ: ಜನಮಂಗಳ ಯೋಜನೆಯಡಿ ವೀಲ್‌ಚೇರ್ ವಿತರಣೆ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಕಡಬ ತಾಲೂಕು, ಅಲಂಕಾರು ವಲಯದ ವತಿಯಿಂದ ಜನಮಂಗಳ ಕಾರ್ಯಕ್ರಮದಡಿ ಕೊಂತೂರು ಗ್ರಾಮದ ಅನಾರೋಗ್ಯದಿಂದ ಬಳಲುತ್ತಿದ್ದ ಅಂತಕ ಶೆಟ್ಟಿಗೆ ವೀಲ್‌ಚೇರ್ ವಿತರಿಸಲಾಯಿತು.

ಅಂತಕ ಶೆಟ್ಟಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ನಡೆದಾಡಲು ಅಸಾಧ್ಯವಾದ ಹಿನ್ನೆಲೆ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಒದಗಿಸಲಾದ ವೀಲ್‌ಚೇರ್ ಅನ್ನು ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಅಲಂಕಾರು ವಲಯದ ಮೇಲ್ವಿಚಾರಕಿ ಲತಾ, ಸೇವಾಪ್ರತಿನಿಧಿ ಸವಿತಾ, ಸುವಿಧಾ ಸಹಾಯಕ ಚೆನ್ನಕೇಶವ ರೈ ಗುತ್ತುಪಾಲು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಕೇಶವ ಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜನಮಂಗಳ ಯೋಜನೆಯ ಮೂಲಕ ಅಗತ್ಯವಿರುವವರಿಗೆ ನೆರವು ನೀಡುವ ಕಾರ್ಯಗಳು ಸಮಾಜಮುಖಿ ಸೇವೆಯ ಭಾಗವಾಗಿದ್ದು, ಇಂತಹ ಸೇವೆಗಳು ನಿರಂತರವಾಗಿ ನಡೆಯಲಿವೆ ಎಂದು ತಿಳಿಸಲಾಯಿತು.

 

Leave a Reply

error: Content is protected !!