







ಉಪ್ಪಿನಂಗಡಿ: ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಪರಿಸರ ಸಂರಕ್ಷಣಾ ಗತಿ ವಿಧಿಯ ರಾಜ್ಯಸಂಯೋಜಕರಾದ ಜಯರಾಮ ಬೊಳ್ಳಾಜೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ‘ನಿತ್ಯಜೀವನದಲ್ಲಿ ಪರಿಸರ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದು ಕೇವಲ ಪರಿಸರ ದಿನಕ್ಕೆ ಸೀಮಿತವಾಗಿರದೆ, ಪ್ರತಿದಿನವೂ ಪರಿಸರದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂದು ಅವರು ತಿಳಿಸಿದರು.
ಗಿಡ-ಮರಗಳು ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದು, ಅವುಗಳಿಲ್ಲದಿದ್ದರೆ ಜೀವನ ನಿಸ್ಸಾರವಾಗುತ್ತದೆ ಎಂದು ಹೇಳಿದ ಅವರು, ನೈಜ ಘಟನೆಗಳನ್ನು ಉದಾಹರಣೆಯಾಗಿ ನೀಡಿ ಪ್ರಕೃತಿಯ ಗಂಭೀರ ಸ್ಥಿತಿಗತಿಗಳನ್ನು ವಿವರಿಸಿದರು. ಲಘು ಹಾಸ್ಯದ ಮೂಲಕ ಪರಿಸರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ತಿಳಿಸಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ರವಿ ಇಳಂತಿಲ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ವೀಣಾ ಆರ್. ಪ್ರಸಾದ್ ಮಾರ್ಗದರ್ಶನ ನೀಡಿದರು.
ಸಹಶಿಕ್ಷಕಿ ನಿಶಿತಾ ಕೆ.ಕೆ. ಸ್ವಾಗತಿಸಿದರು. ಸಹಶಿಕ್ಷಕ ಕರುಣಾಕರ ಕಾರ್ಯಕ್ರಮ ನಿರೂಪಿಸಿದರು.



