










ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಉದನೆ ವಲಯ ಮಟ್ಟದ ಮಾತೆಯರ ಒಕ್ಕೂಟದ ವಾರ್ಷಿಕ ಮಾತೃಸಂಗಮ ‘ಫಿದೆಲಿಯುಂ–2026’ ಕಾರ್ಯಕ್ರಮವು ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ನಡೆಯಿತು.
ವಂ.ಫಾ.ಜೋಬಿ ಪುಲ್ಲಾಟ್ ಉದ್ಘಾಟಿಸಿ ಮಾತನಾಡಿ ಉತ್ತಮ ಸಮಾಜ ಮತ್ತು ಸದೃಢ ಕುಟುಂಬ ನಿರ್ಮಾಣದಲ್ಲಿ ಮಾತೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಇಂದಿನ ಸಮಾಜದಲ್ಲಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮಾತೆಯರು ಧಾರ್ಮಿಕ ಮೌಲ್ಯಗಳು, ಉತ್ತಮ ಸಂಸ್ಕಾರ ಹಾಗೂ ನೈತಿಕತೆಯನ್ನು ಬೆಳೆಸುವ ಪ್ರೇರಕಶಕ್ತಿಯಾಗಿ ಕಾರ್ಯನಿರ್ವಹಿಸಬೇಕೆಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಫಾ.ರಿಜೊ ಒಡೋಪಲ್ಲಿ, ಸಿಸ್ಟರ್ ಲಿಸ್ ಮ್ಯಾಥ್ಯೂ ಎಸ್.ಎಚ್., ರೇಖಾ ಅಡ್ಡಹೊಳೆ, ಸಿಮಿ ಆರ್ಲ, ಸುಜಾ ಜೇಮ್ಸ್ ಹಾಗೂ ಫಾ. ಶಾಜಿ ಮ್ಯಾಥ್ಯೂ ಅವರು ಕುಟುಂಬ ಜೀವನ, ಕ್ರೈಸ್ತ ಮೌಲ್ಯಗಳು, ಮಾತೆಯರ ಜವಾಬ್ದಾರಿ ಹಾಗೂ ಸಮಾಜಮುಖಿ ಸೇವೆಯ ಕುರಿತು ವಿವಿಧ ವಿಚಾರಗಳನ್ನು ಮಂಡಿಸಿ ಮಾರ್ಗದರ್ಶನ ನೀಡಿದರು.
ಮಿನಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ನೆಲ್ಯಾಡಿ, ಆರ್ಲ, ಇಚಿಲಂಪಾಡಿ, ಉದನೆ, ಶಿರಾಡಿ, ಅಡ್ಡಹೊಳೆ ಹಾಗೂ ಅರಸಿನಮಕ್ಕಿ ಚರ್ಚ್‌ಗಳ ಮಾತೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



