ಇಂಗ್ಲಿಷ್ ಮಾಧ್ಯಮ ಶಾಲೆಗಳ ಹೆಚ್ಚಳದಿಂದ ಶಿಕ್ಷಕಿಯರಿಗೆ ಬೇಡಿಕೆ; ಐಐಸಿಟಿ ಶಿಕ್ಷಣ ಸಂಸ್ಥೆಯಿಂದ ಪ್ರವೇಶಕ್ಕೆ ಆಹ್ವಾನ











ಕಡಬ: ಪಿಯುಸಿ ಅಥವಾ ಪದವಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಶಿಕ್ಷಕಿಯಾಗುವ ಕನಸು ಹೊಂದಿರುವ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಉತ್ತಮ ಅವಕಾಶ ಒದಗಿದೆ. ಕಡಬದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಐಸಿಟಿ ಶಿಕ್ಷಣ ಸಂಸ್ಥೆ ವತಿಯಿಂದ ಮೊಂಟೇಸರಿ (ನರ್ಸರಿ) ಶಿಕ್ಷಕಿಯರ ಕೋರ್ಸ್‌ಗೆ ತರಬೇತಿ ಆರಂಭಗೊಂಡಿದೆ.
ಇತ್ತೀಚಿನ ವರ್ಷಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಗುಣಮಟ್ಟದ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಕಿಯರ ಬೇಡಿಕೆಯೂ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಮೊಂಟೇಸರಿ ಶಿಕ್ಷಕಿಯರ ತರಬೇತಿ ಉತ್ತಮ ಅವಕಾಶವಾಗಿದೆ.
ಈ ತರಬೇತಿಯ ಮೂಲಕ ಮಕ್ಕಳ ಮನೋವಿಜ್ಞಾನ, ಬೋಧನಾ ಕೌಶಲ್ಯ, ತರಗತಿ ನಿರ್ವಹಣೆ, ಸೃಜನಾತ್ಮಕ ಕಲಿಕಾ ವಿಧಾನಗಳು ಸೇರಿದಂತೆ ಶಾಲಾ ಶಿಕ್ಷಣಕ್ಕೆ ಅಗತ್ಯವಾದ ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿ ಪೂರ್ಣಗೊಳಿಸಿದವರಿಗೆ ವಿವಿಧ ಖಾಸಗಿ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಉದ್ಯೋಗಾವಕಾಶಗಳೂ ಲಭ್ಯವಾಗಲಿವೆ.
ಪಿಯುಸಿ, ಪದವಿ ಅಥವಾ ಸಮಾನ ವಿದ್ಯಾರ್ಹತೆ ಹೊಂದಿರುವ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಕಡಬದ ಐಐಸಿಟಿ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಬಹುದು ಅಥವಾ 9448409912 ಸಂಖ್ಯೆಗೆ ಸಂಪರ್ಕಿಸಿ ಪ್ರವೇಶ ಹಾಗೂ ತರಬೇತಿ ಕುರಿತ ವಿವರಗಳನ್ನು ಪಡೆಯಬಹುದು.



