ನೇಸರ ಮಾ.29: ತೆಲುಗು ಸೂಪರ್ ಸ್ಟಾರ್ ನಟ ಪವನ್ ಕಲ್ಯಾಣ್ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಮಹಾಪೂಜೆ, ಆಶ್ಲೇಷಾಬಲಿ ಪೂಜೆ ಹಾಗು ಆದಿ ಸುಬ್ರಹ್ಮಣ್ಯ ದೇವಾಲಯದಲ್ಲಿ ವಸ್ತ್ರ ಸಮರ್ಪಣೆ ಮಾಡಿದರು.
ದೇವಾಲಯದ 500ಕ್ಕೂ ಮಿಕ್ಕಿದ ನೌಕರರು, ಆಡಳಿತ ಮಂಡಳಿಯೊಂದಿಗೆ ಸೇರಿ ಪ್ರತಿ ಏಕಾದಶಿಯಂದು ನಡೆಸುವ ಸ್ವಚ್ಛ ಮಂದಿರ ಸೇವಾ ಅಭಿಯಾನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪ್ರತಿ ದೇವಾಲಯದವರು ಕೂಡ ಈ ರೀತಿ ತೊಡಗಿಸಿಕೊಳ್ಳಬೇಕು ಹಾಗೂ ಇಲ್ಲಿ ಬರುವ ಭಕ್ತಾದಿಗಳು ಆದಷ್ಟು ಪ್ಲಾಸ್ಟಿಕ್ ಕಡಿಮೆ ಬಳಕೆ ಮಾಡಿ. ಇದು ನಾಗ ಸಂಚಾರದ ಕ್ಷೇತ್ರ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದಲ್ಲಿ ಬಿಸಾಡಿ ಅವುಗಳಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು. ದೇವಾಲಯದ ಮಾಸ್ಟರ್ ಪ್ಲಾನಿನಲ್ಲಿ ತೆಗೆದುಕೊಳ್ಳಲು ನಿರ್ಣಯಿಸಿರುವ ಕಟ್ಟಡಗಳ ಬಗ್ಗೆ. ಮೆಚ್ಚುಗೆ ವ್ಯಕ್ತ ಪಡಿಸಿ, ನಾನು ನಿಮ್ಮೊಂದಿಗೆ ಜೊತೆಗೂಡುವುದರೊಂದಿಗೆ ದೇವಾಲಯದ ಪಾವಿತ್ರತೆ ಹಾಗು ಪರಂಪರೆಯನ್ನು ಮುಂದುವರಿ ಸೋಣ ಎಂದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ಸುಳ್ಳಿ ನಟ ಪವನ್ ಕಲ್ಯಾಣ್ ಅವರಿಗೆ ಗೌರವಾರ್ಪಣೆ ಮಾಡಿದರು
ನಂತರ ಅವರು ಭೂ ಸುಪೋಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿ “ಪುತ್ರಾನ್ಜೀವ” ಎಂಬ ಸುಬ್ರಮಣ್ಯ ದೇವರಿಗೆ ಸಂಬಂಧ ಪಟ್ಟ ಮರವನ್ನು ನೆಟ್ಟರು.