ಅರಸಿನಮಕ್ಕಿಯಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ಸರಕಾರದಿಂದಲೇ ನಿರ್ಮಾಣಗೊಳ್ಳಲಿದೆ ಮಾದರಿ ಶಾಲೆ – ಶಾಸಕ ಹರೀಶ್ ಪೂಂಜಾ

ಶೇರ್ ಮಾಡಿ

ನೇಸರ ಮಾ.29: ಶೈಕ್ಷಣಿಕ ಸಮಸ್ಯೆಗಳಿಗೆ ಮುಕ್ತಿ ಹಾಡಿ ಒಂದೇ ಸೂರಿನಡಿ ಮಕ್ಕಳಿಗೆ ಕಲಿಕೆಯ ಭಾಗ್ಯ ನೀಡಲು ಹಾಲಿ ರಾಜ್ಯ ಸರಕಾರ ಉತ್ಸುಕವಾಗಿದ್ದು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಮಾದರಿ ಶಾಲೆ ನಿರ್ಮಾಣಗೊಳ್ಳುವ ಪ್ರಯತ್ನ ಅಂತಿಮ ಹಂತದಲ್ಲಿದೆ.
ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾರವರು ಅರಸಿನಮಕ್ಕಿಯಲ್ಲಿ ಮಾದರಿ ಶಾಲೆಯ ಪ್ರಸ್ತಾಪವನ್ನು ಸರಕಾರದ ಮುಂದಿಟ್ಟಿದ್ದು ಶೀಘ್ರ ಅನುಷ್ಠಾನಕ್ಕೆ ತರುವುದಾಗಿ ತಿಳಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಂತಹ ಉನ್ನತ ದರ್ಜೆಯ ಶಿಕ್ಷಣ ಗಗನಕುಸುಮ ಅನ್ನುವ ಹೊತ್ತಿನಲ್ಲಿ ಸರಕಾರಿ ಶಾಲೆಯಲ್ಲಿ ಶಾಸಕರ ಮಾದರಿ ಶಾಲೆಯ ಘೋಷಣೆ ಆಶಾಭಾವದ ಭರವಸೆಯನ್ನು ನೀಡಿದೆ.
ಪ್ರಸ್ತುತ ಬಜೆಟ್‌ನಲ್ಲಿ ಸರ್ಕಾರಿ ಶಾಲೆಯ ಮೂಲಭೂತ ಸೌಲಭ್ಯ ಹೆಚ್ಚಿಸಲು ಸರಕಾರ 500ಕೋಟಿ ಮೀಸಲಿರಿಸಿದೆ. ಜೊತೆಗೆ ಮಾದರಿ ಶಾಲೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಸರ್ಕಾರಿ ಶಾಲೆಗಳ ಸುಧಾರಣೆಗಾಗಿ ಹಲವಾರು ದಶಕಗಳ ನಂತರದ ಅತಿ ದೊಡ್ಡ ಮಟ್ಟದ ಬಜೆಟ್ ಘೋಷಣೆ ಇದಾಗಿದ್ದು, ಮಾದರಿ ಶಾಲೆ ರಚನೆಯಲ್ಲಿ ಬೆಳ್ತಂಗಡಿ ತಾಲೂಕು ಅಗ್ರ ಪಂಕ್ತಿಯಲ್ಲಿದೆ.
ಈ ಮಾದರಿ ಶಾಲೆಯಲ್ಲಿ LKG ಇಂದ ಪಿಯುಸಿ ವರೆಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ. ಒಂದೇ ಸೂರಿನಡಿಯಲ್ಲಿ ಎಲ್ಲಾ ಗ್ರಾಮಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ಸಿನ ಸೌಕರ್ಯವನ್ನು ಕಲ್ಪಿಸಲಾಗುತ್ತದೆ. ದೆಹಲಿಯಲ್ಲಿ ಇರುವ ಮಾದರಿ ಶಾಲೆಯಂತೆ ಕರ್ನಾಟಕದ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿಯೂ ಅದನ್ನು ಮೀರಿಸುವಂತಹ ಮಾದರಿ ಶಾಲೆ ನಿರ್ಮಾಣಗೊಳ್ಳಲಿದೆ.
ಅರಸಿನಮಕ್ಕಿಯಲ್ಲಿ ನಿರ್ಮಾಣ : ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯಲ್ಲಿ ಈಗಾಗಲೇ ಸರಕಾರಿ ಪ್ರೌಢಶಾಲೆ ಮತ್ತು ಪ. ಪೂ. ಕಾಲೇಜು ಒಂದೇ ಕ್ಯಾಂಪಸ್ ನಲ್ಲಿದ್ದು 5.5 ಎಕರೆ ಶಾಲೆಯ ಹೆಸರಲ್ಲಿ ಜಾಗವನ್ನೂ ಹೊಂದಿದೆ. ಈಗಾಗಲೇ ಸುವರ್ಣ ವರ್ಷಗಳನ್ನು ಕಂಡಿರುವ ಇದೇ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸುವ ಯೋಚನೆ ಶಾಸಕರದ್ದಾಗಿದೆ.
ಗ್ರಾಮೀಣ ಪ್ರದೇಶವಾದ ಶಿಶಿಲ, ಶಿಬಾಜೆ, ರೆಖ್ಯ, ಪೆರ್ಲ, ಹತ್ಯಡ್ಕ, ಅರಸಿಮಕ್ಕಿ, ಕುಂಟಾಲಪಳಿಕೆ, ಕಳೆಂಜ, ಕೊಕ್ಕಡ ಅಸುಪಾಸಿನ ಭಾಗದ ವಿಧ್ಯಾರ್ಥಿಗಳಿಗೂ ಈ ಮಾದರಿ ಶಾಲೆ ಉತ್ತಮ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಲಿದೆ ಎನ್ನುವುದು ಇಲ್ಲಿನ ವಿದ್ಯಾಭಿಮಾನಿಗಳ ಆಶಯವಾಗಿದೆ.
ಜನರ ನಿರೀಕ್ಷೆಗಳು :
ನುರಿತ ಶಿಕ್ಷಕರಿಂದ ಶಿಕ್ಷಣ ದೊರೆತಾಗ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಾಗಲಿದೆ. ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಮತ್ತು ಹಳ್ಳಿಯ ಮಕ್ಕಳು ಸ್ಪರ್ಧಾತ್ಮಕವಾಗಿ ಬೆಳೆಯಲು ಮಾದರಿ ಶಾಲೆ ಪೂರಕವಾಗಲಿದೆ. ನವೋದಯ ಹಾಗೂ ಮೊರಾರ್ಜಿ ದೇಸಾಯಿ ಅಂತಹ ಮಾದರಿ ಶಾಲೆಗಳ ಹಾಗೆಯೇ ಈ ಶಾಲೆಯು ಇರಬಹುದು ಎನ್ನುವ ಆಶಾಭಾವನೆ ಇಲ್ಲಿನವರದ್ದಾಗಿದೆ. ಸುಸಜ್ಜಿತ ಕಟ್ಟಡದ ಜೊತೆಗೆ ಅತ್ಯುನ್ನತ ಉಪಕರಣಗಳನ್ನು ಒಳಗೊಂಡಂತಹ ಲ್ಯಾಬ್ ಮತ್ತು ಡಿಜಿಟಲ್ ವ್ಯವಸ್ಥೆಯ ಶಿಕ್ಷಣದೊಂದಿಗೆ ಸುಸಜ್ಜಿತ ಕಟ್ಟಡದ ಜೊತೆಗೆ
ಈಗಾಗಲೇ ಮಾದರಿ ಶಾಲೆಯ ಪ್ರಸ್ತಾಪವು ಅನುಷ್ಠಾನಗೊಂಡಿದ್ದು, ಪ್ರಸಕ್ತ ಅಧಿವೇಶನದ ನಂತರ ಮಾದರಿ ಶಾಲೆ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬ ಸ್ಪಷ್ಟ ಚಿತ್ರಣ ವಿದ್ಯಾಭಿಮಾನಿಗಳಿಗೆ ದೊರೆಯಲಿದೆ.

ವೀಕ್ಷಿಸಿ SUBSCRIBERS ಮಾಡಿ

Leave a Reply

error: Content is protected !!