ನೇಸರ ಎ.04: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದಿಂದ ಮಹಾಲಿಂಗೇಶ್ವರ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಎ. 14ರಂದು ನಡೆಯಲಿರುವ ಪುತ್ತೂರು ಘಟಕದ 5ನೇ ವಾರ್ಷಿಕ ಸಮಾರಂಭದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಎ.3ರಂದು ದರ್ಬೆ ಪುತ್ತೂರು ಪ್ರಶಾಂತ್ ಮಹಲ್ ನ ಸನ್ನಿಧಿ ಸಭಾಂಗಣದಲ್ಲಿ ನಡೆಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಗೌರವಾಧ್ಯಕ್ಷರಾಗಿರುವ ಸವಣೂರು ವಿದ್ಯಾ ರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಹಾಗೂ ಟ್ರಸ್ಟಿ ಅರಿಯಡ್ಕ ಚಿಕ್ಕಪ್ಪ ನ್ಯಾಕ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಆಮಂತ್ರಣ ಬಿಡುಗಡೆ ಮಾಡಿದ ಪುತ್ತೂರು ಘಟಕದ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಮಾತನಾಡಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಾರಂಭವಾದ ಬಳಿಕ ಎಲ್ಲಾ ಮೇಳಗಳ ಕಲಾವಿದರಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುವಂತಾಗಿದೆ. ಹೀಗಾಗಿ ಪಟ್ಲ ಫೌಂಡೇಶನ್ ಕಲಾವಿದರ ಬದುಕಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಕಲಾವಿದರನ್ನು ಪೋಷಿಸುವ ಸಂಸ್ಥೆಯಾಗಿ ಬೆಳೆಯುತ್ತಿರುವ ಪಟ್ಲ ಫೌಂಡೇಶನ್ ವಿವಿಧ ದೇಶಗಳಲ್ಲಿ 29 ಘಟಕಗಳು ಕಾರ್ಯಾಚರಿಸುತ್ತಿದ್ದು, ನಮ್ಮ ಜಿಲ್ಲೆಗೆ ಹೆಮ್ಮೆಯಾಗಿದೆ ಎಂದರು.
ಅರಿಯಡ್ಕ ಚಿಕ್ಕಪ್ಪ ನ್ಯಾಕ್ ಮಾತನಾಡಿ, ಕಲಾವಿದರನ್ನು ಪೋಷಿಸಿ ಬೆಳೆಸುತ್ತಿರುವ ಪಟ್ಲ ಫೌಂಡೇಶನ್ ನ 5ನೇ ವಾರ್ಷಿಕೋತ್ಸವ ಪುತ್ತೂರು ಜಾತ್ರೋತ್ಸವದಲ್ಲಿ ನಡೆಯುತ್ತಿದ್ದು ಪ್ರತಿಯೊಬ್ಬರೂ ಸಹಕರಿಸುವಂತೆ ಮನವಿ ಮಾಡಿದರು.
ಪುತ್ತೂರು ಘಟಕದ ಅಧ್ಯಕ್ಷ ನೋಣಾಲು ಜೈರಾಜ್ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ, 2015ರಲ್ಲಿ ಪ್ರಾರಂಭಗೊಂಡ ಘಟನೆ ನಿರಂತರವಾಗಿ ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡು ಕಲಾವಿದರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದೆ ಸುಮಾರು ವೃತ್ತಿಪರ ಹವ್ಯಾಸಿ ಹಾಗೂ ನಾಟಕ ಕಲಾವಿದರಿಗೆ ಕಳೆದ ಏಳು ವರುಷಗಳಲ್ಲಿ ರೂ.6 ಕೋಟಿ ಮೊತ್ತದ ಧನಸಹಾಯ ವಿತರಿಸಿದೆ. ಕೋವಿಡ್ ಸಂದರ್ಭದಲ್ಲಿ ರಾಜ್ಯದಾದ್ಯಂತ ಒಂದು ಕೋಟಿ ಮೌಲ್ಯದ ಕಿಟ್ ವಿತರಿಸಲಾಗಿದೆ ಎಂದು ಹೇಳಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಘಟಕದ ಗೌರವ ಸಲಹೆಗಾರ ಕರುಣಾಕರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣೇಶ್ ರೈ ಡಿಂಗ್ರಿ, ಸತೀಶ್ ರೈ, ಜಯಶೀಲ ರೈ, ಸುಧೀರ್ ಕುಮಾರ್ ಕೆ ಎಸ್, ದೀಪಕ್, ಹರಿಣಾಕ್ಷಿ ಜೆ. ಶೆಟ್ಟಿ, ಅಶ್ವಿನ್ ಎಲ್ ಶೆಟ್ಟಿ, ಡಾ ಅಶೋಕ್ ಪಡಿವಾಳ್, ಎ.ಏನ್.ಶೆಟ್ಟಿ, ಎಂ ಗಂಗಾಧರ ರೈ, ಕೆ ಬಾಲಚಂದ್ರ ರೈ, ಶಿವರಾಮ ಆಳ್ವ, ಕೆ ಎಚ್ ದಾಸಪ್ಪ ರೈ, ಸಂತೋಷ್ ರೈ, ಉಮಾನಾಥ ಪಿ.ಬಿ, ಕೆ.ಬಾಲಕೃಷ್ಣ ಶೆಟ್ಟಿ, ಸೂರ್ಯನಾಥ ಆಳ್ವ, ರಾಮಣ್ಣ ಗೌಡ ಮೊದಲಾದವರು ಭಾಗವಹಿಸಿದ್ದರು.
ಚಂದ್ರಹಾಸ ರೈ ತುಂಬೆಕೋಡಿ ಪ್ರಾರ್ಥಿಸಿದರು. ನೋಣಾಲು ಜೈರಾಜ್ ಭಂಡಾರಿ ಸ್ವಾಗತಿಸಿದರು. ಉದಯ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
—ಜಾಹೀರಾತು—