ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗೂ ಮಾಹಿತಿ ಶಿಬಿರ

ಶೇರ್ ಮಾಡಿ

ನೇಸರ ಎ.03: ಜೇಸಿಐ ವಿಟ್ಲ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶು ಸಂಗೋಪನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ವಿಟ್ಲ, ಬಂಟ್ವಾಳ ಕೊಳ್ನಡು ಗ್ರಾಮಪಂಚಾಯ್, ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘ, ಕೊಡಂಗಾಯಿ ಹಾಲು ಉತ್ಪಾದಕರ ಸಹಕಾರಿ ಸಂಘ, ಮಾದಕಟ್ಟೆ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ, ಉಳಿಯತಡ್ಕ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ, ಇವರ ಸಂಯುಕ್ತ ಆಶ್ರಯದಲ್ಲಿ “ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗೂ ಮಾಹಿತಿ ಶಿಬಿರ” ವು ಮಂಕುಡೆ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಡಾ|ಪರಮೇಶ್ವರ ಸ್ವಾಗತಿಸಿ ಪ್ರಸ್ತಾವನೆಗೈದರು. ಗೋವು ಪೂಜೆಯೊಂದಿಗೆ ಕಾರ್ಯಕ್ರಮ ವನ್ನು ಮಂಕುಡೆ ಶ್ರೀನಿವಾಸ್ ಆಚಾರ್ ಮುಕ್ತೇಸರರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ,ಮಂಕುಡೆ ಇವರು ಉದ್ಘಾಟಿಸಿದರು.

ಅ.ಭಾ.ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಮಣ್ಣು ಪರೀಕ್ಷಾ ವಿಜ್ಞಾನಿ ಮಲ್ಲಿಕಾರ್ಜುನ ಇವರು ಮಣ್ಣಿನ ಪರೀಕ್ಷೆಯ ಮಹತ್ವ ಹಾಗೂ ಗೊ ಉತ್ಪನ್ನಗಳನ್ನು ಉಪಯೋಗಿಸಿ ಮಣ್ಣಿನ ನೈರ್ಮಲ್ಯವನ್ನು ಕಾಪಾಡುವ ಮಹತ್ವ ತಿಳಿಸಿದರು.
ಸುಮಾರು 45 ಮಿಶ್ರ ತಳಿ ಜರ್ಸಿ ಹಾಗೂ ಮಿಶ್ರ ತಳಿ ಹೆಚ್.ಎಫ್ ಕರುಗಳು ಪ್ರದರ್ಶನ ದಲ್ಲಿದ್ದವು. ತೀರ್ಪುಗಾರರಾಗಿ ಡಾ|ಅಶೋಕ್ ಶೆಟ್ಟಿ, ಡಾ|ಉಮೇಶ್, ಡಾ|ನಿಖಿಲ್ ತೀರ್ಪು ನೀಡಿದರು. ಡಾ|ಕೃಷ್ಣ ಮೂರ್ತಿ ಜಾನುವಾರು ಅಧಿಕಾರಿ ಬಂಟ್ವಾಳ, ಡಾ|ಶ್ರೀಧರ ಶೆಟ್ಟಿ ಜಾನುವಾರು ಅಧಿಕಾರಿ ಮಂಗಳೂರು ಉಪಸ್ಥಿತರಿದ್ದರು. ಡಾ|ಶ್ರೀ ಮಂದಾರ ಜೈನ್ ವಂದಿಸಿದರು.

ವೀಕ್ಷಿಸಿ SUBSCRIBERS ಮಾಡಿ

 

—ಜಾಹೀರಾತು—

Leave a Reply

error: Content is protected !!