ನೇಸರ ಎ.07: ಉಪ್ಪಿನಂಗಡಿ ನೀರಕಟ್ಟೆ ಸುಮಾರು 800 ವರ್ಷ ಇತಿಹಾಸ ಇರುವ ಪುತ್ತೂರು ತಾಲೂಕು ಮಡಂಬಡಿತ್ತಾಯ ಕುಟುಂಬದ ನೂತನ ತರವಾಡು ಮನೆಯ ನಿರ್ಮಾಣ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಿಯ ಪುನಃ ಪ್ರತಿಷ್ಠೆ ಗಾಣದಮೂಲೆ ಎಂಬಲ್ಲಿ ವಿಜ್ರಂಭಣೆ ಯಿಂದ ಜರಗಿತು.
ವೇದಮೂರ್ತಿ ಶ್ರೀ ನರಹರಿ ಉಪಾದ್ಯಾಯ ಮತ್ತು ವೇದಮೂರ್ತಿ ಶ್ರೀ ಭಾರತಿರಮಣ ಆಚಾರ್ಯ ಇವರ ಧಾರ್ಮಿಕ ವಿಧಿ ವಿಧಾನದಿಂದ ಮೂರು ದಿನದ ದೇವತಾ ಕಾರ್ಯ ಮತ್ತು ಶ್ರೀದುರ್ಗಾ ದೇವಿ ಪುನಃ ಪ್ರತಿಷ್ಠೆ ಜರಗಿತು.
ಮಡಂಬಡಿತ್ತಾಯ ಕುಟುಂಬದ ಸದಸ್ಯರು, ಗ್ರಾಮದ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
—ಜಾಹೀರಾತು—