ರಾಜ್ಯಮಟ್ಟದ ಆನ್ ಲೈನ್ “ಯುವೋತ್ಸವ” ಭಾಷಣ ಸ್ಪರ್ಧೆ : ಅರಸಿನಮಕ್ಕಿಯ ವೃಷಾಂಕ್ ಖಾಡಿಲ್ಕರ್ ಪ್ರಥಮ

ಶೇರ್ ಮಾಡಿ

ನೇಸರ ಎ.07: ಜೇಸಿಐ ಮಂಜುಶ್ರೀ ಬೆಳ್ತಂಗಡಿ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ “ಯುವೋತ್ಸವ” ಕಾರ್ಯಕ್ರಮದ ಅಂಗವಾಗಿ “ಯುವ ಮನಸ್ಸುಗಳಲ್ಲಿ ಸ್ವಾಮಿ ವಿವೇಕಾನಂದರು” ಎಂಬ ವಿಷಯದ ಕುರಿತು ರಾಜ್ಯದ ವಾಗ್ಮಿಗಳಿಗೆ ವೇದಿಕೆಯನ್ನು ಸೃಷ್ಟಿಸಬೇಕು ಮತ್ತು ಸ್ವಾಮಿ ವಿವೇಕಾನಂದರ ಚಿಂತನೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಆನ್ ಲೈನ್ ಕನ್ನಡ ಭಾಷಣ ಸ್ಪರ್ಧೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದು ಇದೀಗ ವಿಜೇತರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಜೇಸಿ. ಪ್ರಸಾದ್ ಬಿ.ಎಸ್. ಅವರ ಅಧ್ಯಕ್ಷತೆಯಲ್ಲಿ, ಸ್ಪರ್ಧೆಯ ಸಂಯೋಜಕ ಜೇಸಿ. ಚಂದ್ರಹಾಸ ಬಳಂಜ, ರಂಗ ಕಲಾವಿದ ಸ್ಮಿತೇಶ್ ಎಸ್. ಬಾರ್ಯ ತೀರ್ಪುಗಾರಿಕೆಯನ್ನು ನೀಡಿದ್ದು ವಿಷಯದ ಪ್ರಸ್ತುತಿ, ಜ್ಞಾನ, ನಿರರ್ಗಳತೆ, ಭಾಷಾ ಹಿಡಿತ, ಒಟ್ಟು ಪ್ರಭಾವವನ್ನು ಆಧರಿಸಿ ವಿಜೇತರನ್ನು ಆರಿಸಲಾಗಿದೆ.
ಟಾಪ್ 11 ಆಯ್ಕೆ ಆದ ಭಾಷಣಗಳ ವಿಜೇತರು : ಪ್ರಥಮ – ವೃಷಾಂಕ್ ಖಾಡಿಲ್ಕರ್, ದ್ವಿತೀಯ : ಅನ್ನಪೂರ್ಣ ಎಸ್ ಡಿ ಎಂ, ತೃತೀಯ, ಶ್ರೀದೇವಿ ಪುತ್ತೂರು, ಶಾಹಿದ್ ಆಫ್ರಿನ, ಲಿಖಿತ್ ಕಾರ್ಕಳ, ರಚನಾ, ರಾಮ ದೇವಾಡಿಗ, ಚೈತನ್ಯ, ಶ್ರೀರಕ್ಷ, ಸಮ್ಯಕ್ ಜೈನ್, ವಿಮಲಾ ತೇಜಾಕ್ಷಿ, ವಂದನಾ ಹಿರಿಯಡ್ಕ ಆಯ್ಕೆಯಾಗಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ

—ಜಾಹೀರಾತು—

Leave a Reply

error: Content is protected !!