ಕೊಣಾಲು: ಸ್ಟೆಪ್ ಯೋಜನೆಯಡಿ ಸ್ವಸಹಾಯ ಸಂಘಕ್ಕೆ ಬಡ್ಡಿರಹಿತ ಸಾಲ ಹಂಚಿಕೆ

ಶೇರ್ ಮಾಡಿ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಿಂದ ಬದುಕು ನಡೆಸಲು ಸ್ವಸಹಾಯ ಸಂಘಕ್ಕೆ ಬಡ್ಡಿರಹಿತವಾಗಿ ಸಾಲ ಹಂಚಲಾಯಿತು.
                                                                  – ಉಷಾ ಅಂಚನ್, ಅಧ್ಯಕ್ಷರು ಕೊಣಾಲು ಆರ್ಲ ಮಹಿಳಾ ಹಾಲು ಉತ್ಪಾದಕರ ಸಂಘ

ನೇಸರ ಎ.12: ಕೊಣಾಲು ಆರ್ಲ ಮಹಿಳಾ ಹಾಲು ಉತ್ಪಾದಕರ ಸಂಘದಲ್ಲಿ ಸ್ಟೆಪ್ ಯೋಜನೆಯಡಿ ನಂದಿನಿ ಸ್ವಸಹಾಯ ಸಂಘ ಹಾಗೂ ಅಮೃತಧಾರೆ ಸ್ವಸಹಾಯ ಸಂಘಕ್ಕೆ ದಕ್ಷಿಣ ಕನ್ನಡ ಹಾಲು ಒಕ್ಕೂಟ ಮಂಗಳೂರು ಇದರ ವತಿಯಿಂದ 3 ಲಕ್ಷ ರೂಪಾಯಿಯನ್ನು ತಲಾ 10 ಜನರಿಗೆ ಬಡ್ಡಿರಹಿತವಾಗಿ ಸಾಲವನ್ನು ಹಂಚಲಾಯಿತು. ಇದರಿಂದ ಮಹಿಳೆಯರು ದನವನ್ನು ಖರೀದಿಸಿ ಆರ್ಥಿಕವಾಗಿ ಸ್ವಾವಲಂಬನೆಯಿಂದ ಬದುಕು ನಡೆಸಲು ಸಾಧ್ಯವಾಗಲಿ ಎಂಬ ಉದ್ದೇಶದಿಂದ ನೀಡುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷರಾದ ಉಷಾ ಅಂಚನ್ ಈ ಸಂದರ್ಭದಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ಟೆಪ್ ಯೋಜನೆಯ ಯೋಜನಾಧಿಕಾರಿ ನಳಿನಿ ಉಪಸ್ಥಿತರಿದ್ದು ಶುಭವನ್ನು ಹಾರೈಸಿದರು. ಸ್ವಸಹಾಯ ಸಂಘ ಸದಸ್ಯರು ಉಪಸ್ಥಿತರಿದ್ದರು.

 

—ಜಾಹೀರಾತು—

Leave a Reply

error: Content is protected !!