ನೇಸರ ಎ.13: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಕಟವಾಗುತ್ತಿರುವ ‘ನಿರಂತರ’ ಪತ್ರಿಕೆಯ ಸಂಪಾದಕರಾದ
ಚಂದ್ರಹಾಸ ಚಾರ್ಮಾಡಿಯವರು ಮಂಡಿಸಿದ “ಕರಾವಳಿ ಕರ್ನಾಟಕದ ಕಥನ ಸಾಹಿತ್ಯದಲ್ಲಿ ಸಂಘರ್ಷ ಮತ್ತು ಸಾಮರಸ್ಯದ ಸ್ವರೂಪಗಳು”(ಆಯ್ದ ಸಣ್ಣಕಥೆ ಮತ್ತು ಕಾದಂಬರಿಗಳನ್ನು ಅನುಲಕ್ಷಿಸಿ) ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.
ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿಶ್ರಾಂತ ಸಹಪ್ರಾಧ್ಯಾಪಕರಾದ ಡಾ.ಕೆ.ವಿ.ನಾಗರಾಜಪ್ಪರವರ ಮಾರ್ಗದರ್ಶನದಲ್ಲಿ ಚಂದ್ರಹಾಸ
ಚಾರ್ಮಾಡಿಯವರು ಕಳೆದ ಐದೂವರೆ ವರ್ಷಗಳಿಂದ ಹಂಪಿ ವಿಶ್ವವಿದ್ಯಾಲಯದಡಿ ಉಜಿರೆಯ ಹಾ.ಮಾ.ನಾ.ಕೇಂದ್ರದ ಸಹಾಯದಲ್ಲಿ
ಪಿಎಚ್.ಡಿ. ಅಧ್ಯಯನವನ್ನು ಕೈಗೊಂಡಿದ್ದರು.
ಎ.12 ರಂದು ಹಂಪಿಯಲ್ಲಿ ನಡೆದ ನುಡಿಹಬ್ಬ– 30ರಲ್ಲಿ ಇವರಿಗೆ ಕರ್ನಾಟಕ ಸರಕಾರದ ಘನತೆವೆತ್ತ ರಾಜ್ಯಪಾಲರು, ಕನ್ನಡ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾಗಿರುವ ಥಾವರ್ ಚಂದ್ಗೆ ಹ್ಲೋಟ್ ರವರು ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು. ಚಂದ್ರಹಾಸ ಚಾರ್ಮಾಡಿ ಯವರು ಕನ್ನಡ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿಧರರಾಗಿದ್ದು ಕಳೆದ ಹದಿನೈದು ವರ್ಷಗಳಿಂದ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ.
ಈಗಾಗಲೇ ಪತ್ರಕರ್ತರಿಗೆ ನೀಡುವ ಪ.ಗೋ.ಪ್ರಶಸ್ತಿ, ಸುಕೃತ ಪ್ರಶಸ್ತಿ, ಸೌರಭ ರತ್ನ ರಾಜ್ಯ ಪ್ರಶಸ್ತಿ, ರಾಜ್ಯದ ಪತ್ರಕರ್ತರಿಗೆ ನೀಡುವ ಹೆಸರಾಂತ ಪ್ರಶಸ್ತಿಯಾದ ಕೆಯುಡಬ್ಲ್ಯುಜೆ ಪ್ರಶಸ್ತಿ, ಉತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಹೀಗೆ ಹಲವಾರು ರಾಜ್ಯ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಚಾರ್ಮಾಡಿಯ ಚನನ ಗೌಡ ಮತ್ತು ಶ್ರೀಮತಿ ಶಾರದ ದಂಪತಿಗಳ ಪುತ್ರರಾಗಿರುವ ಇವರು ತುಳು ನಾಟಕ ಕಲಾವಿದರು ಹೌದು. ಉಡುಪಿ-
ದಕ್ಷಿಣ ಕನ್ನಡ ಫೋಟೋಗ್ರಾಫರ್ಸ್ ಆಸೋಸಿಯೇಶನ್‍ನ ಸದಸ್ಯರಾಗಿ ಉತ್ತಮ ಛಾಯಾಗ್ರಾಹಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರು ಬರೆದ ಎರಡು ಸಾವಿರಕ್ಕೂ ಅಧಿಕ ಲೇಖನಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕರ್ನಾಟಕ ಸರಕಾರದ ವಾರ್ತಾ ಇಲಾಖೆಯ ಮಾನ್ಯತೆ ಕಾರ್ಡ್ ಹೊಂದಿರುವ ಕೆಲವೇ ಪತ್ರಕರ್ತರ ಸಾಲಿನಲ್ಲಿ ಇವರು ಒಬ್ಬರಾಗಿದ್ದಾರೆ.
—ಜಾಹೀರಾತು—