ನೇಸರ ಎ.13: ವಿಶಾಲವಾದ ಕ್ರೀಡಾಂಗಣದಲ್ಲಿ ಓಡಲು ಒಂದು ಟ್ರ್ಯಾಕ್ ಇದೆ. ನಾವು ಟ್ರ್ಯಾಕ್ ತಪ್ಪಿಸಿ ಓಡಿದರೆ ಫಲಿತಾಂಶ ಬರುವುದಿಲ್ಲ. ಅದೇ ರೀತಿ ಪ್ರತಿಯೊಬ್ಬರ ಜೀವನಕ್ಕೂ ಒಂದು ಗುರಿ ಇರಲಿ. ಆ ಗುರಿಯನ್ನು ತಲುಪಲು ಒಂದು ಟ್ರ್ಯಾಕ್ ಇರಲಿ. ಹಾಗೇ ಸತತ ಪ್ರಯತ್ನದಿಂದ ಟ್ರ್ಯಾಕ್ ತಪ್ಪಿಸದೇ ಓಡಲು ಕಲಿತರೆ ನಮಗೆ ಜೀವನದಲ್ಲಿ ಯಶಸ್ಸು ಖಂಡಿತಾ ಎಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿ ಇದರ ದೈಹಿಕ ಶಿಕ್ಷಕರಾದ ಜನಾರ್ದನ ಟಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ಬೆಥನಿ ಐಟಿಐ ನೆಲ್ಯಾಡಿ ಇದರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ಧೇಶಕರೂ ಸಂಚಾಲಕರೂ ಆದ ರೆ| ಫಾ| ಸತ್ಯನ್ ತೋಮಸ್ ಒ.ಐ.ಸಿ.,ವಹಿಸಿ ಎಲ್ಲಾ ಕ್ರೀಡಾ ಪಟುಗಳಿಗೂ ಶುಭ ಹಾರೈಸಿದರು.
ವೇದಿಕೆಯಲ್ಲಿ ಜ್ಞಾನೋದಯ ಬೆಥನಿ ಪಿ.ಯು.ಕಾಲೇಜು ಪ್ರಾಂಶುಪಾಲರಾದ ರೆ|ಫಾ| ತೋಮಸ್ ಬಿಜಿಲಿ, ಎಸ್.ಬಿ. ಕಾಲೇಜು ನೆಲ್ಯಾಡಿ ಇದರ ಪ್ರಾಂಶುಪಾಲರಾದ ರೆ|ಫಾ| ಮೆಲ್ವಿನ್ ಮ್ಯಾಥು, ಬೆಥನಿ ಐ ಟಿ ಐ ಪ್ರಾಂಶುಪಾಲರಾದ ಸಜಿ ಕೆ ತೋಮಸ್, ತರಬೇತಿ ಅಧಿಕಾರಿ ಜೋನ್ ಪಿ.ಎಸ್. ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಸಜಿ ಕೆ ತೋಮಸ್, ಕ್ರೀಡಾಪಟುಗಳಿಗೆ ಪ್ರಮಾಣವಚನ ಬೋಧಿಸಿದರು. ಕಿರಿಯ ತರಬೇತಿ ಅಧಿಕಾರಿ ಹರಿಪ್ರಸಾದ್ ರೈ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಶಿವಾನಂದ ಎಸ್ ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಅಧಿಕಾರಿ ಜೋನ್ ಪಿ.ಎಸ್. ಹಾಗೂ ಶೈಲಾ ಕೆ.ಎ. ಕ್ರೀಡಾ ಕಾರ್ಯಕ್ರಮ ನಿರೂಪಿಸಿದರು. ಜ್ಞಾನೋದಯ ಬೆಥನಿ ಅಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕರಾದ ಸುದರ್ಶನ್, ದೈಹಿಕ ಶಿಕ್ಷಕಿ ಆಶಾ ಹಾಗೂ ಬೆಥನಿ ಐಟಿಐ ನೆಲ್ಯಾಡಿ ಇದರ ಕ್ರೀಡಾ ಉಸ್ತುವಾರಿಗಳೂ ಕಿರಿಯ ತರಬೇತಿ ಅಧಿಕಾರಿಗಳೂ ಆದ ವಿನ್ಸೆಂಟ್ ಸಿ.ಎಸ್, ಶಿವಾನಂದ ಎಸ್ ಮತ್ತು ಐಟಿಐ ಅದ್ಯಾಪಕರುಗಳು ಕ್ರೀಡಾ ಕಾರ್ಯಕ್ರಮಗಳಿಗೆ ಸಹಕರಿಸಿದರು. ವಿದ್ಯಾರ್ಥಿನಿಯರಾದ ಲಿಖಿತ ಮತ್ತು ಬಳಗ ಪ್ರಾರ್ಥಿಸಿದರು.
—ಜಾಹೀರಾತು—