ಶ್ರೀರಾಮನ ನಡೆ ಜಗತ್ತಿಗೆ ಮಾದರಿ: ಶ್ರೀ ಎಡನೀರು ಶ್ರೀಗಳು

ಶೇರ್ ಮಾಡಿ

ನೇಸರ ಎ.16: ಶ್ರೀರಾಮ ಜಗತ್ತಿಗೆ ಮಾದರಿಯಾದ ಅವತಾರಿ ಪುರುಷ. ಆತನ ನಡೆ ನಮಗೆಲ್ಲಾ ಮಾದರಿ. ರಾಮ ನಾಮ ಅತ್ಯಂತ ಪವಿತ್ರ ನಾಮ. ರಾಮ ನಾಮದಿಂದ ಹನುಮ ಬಲವಂತನಾದ. ಆದುದರಿಂದ ಹನುಮ ನಿತ್ಯ ಚಿರಂಜೀವಿ. ಹನುಮನ ಜಯಂತಿಯಂದು ಶ್ರೀರಾಮ ತಾರಕ ಮಂತ್ರ ಹೋಮ ಮಾಡಿರುವುದು ಅಭಿನಂದನೀಯ. ಎಂದು ಎಡನೀರು ಶ್ರೀಗಳಾದ ಸಚ್ಚಿದಾನಂದ ಸ್ವಾಮೀಜಿ ನುಡಿದರು. ಅವರು ಶಿಶಿಲ ಗ್ರಾಮದ ಶಿವಕೀರ್ತಿ ನಿಲಯದ ಜಯರಾಮ ನೆಲ್ಲಿತ್ತಾಯರ ಮನೆಯಲ್ಲಿ ನಡೆದ ಹನುಮ ಜಯಂತಿ ಮತ್ತು ಶ್ರೀ ರಾಮ ತಾರಕ ಮಂತ್ರ ಜಪ ಹೋಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಶಿಶಿಲದ ಶಿವಕೀರ್ತಿ ನಿಲಯದಲ್ಲಿ ಹನುಮಜಯಂತಿ, ಶ್ರೀರಾಮ ತಾರಕ ಜಪ ಹೊಮ, ರಾಮಾಯಣ ಗ್ರಂಥ ಪೂಜೆ, ಭಜನೆ ಮುಂತಾದ ಕಾರ್ಯಕ್ರಮ ಊರ ಪರವೂರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಜರಗಿತು.
ರಾಮಕೃಷ್ಣ ಕಾಟುಕುಕ್ಕೆ ಅವರಿಂದ “ಶ್ರೀರಾಮ” ಗಾಯನ, ಶ್ರೀ ರಾಘವೇಂದ್ರ ಭಟ್ ಕಿಗ್ಗ ಮತ್ತು ಶ್ರೀಮತಿ ಲೀಲಾ ಶ್ರೀಧರ ರಾವ್ ಅವರಿಂದ ಭಕ್ತಿಗಾನ ನಡೆದಿತ್ತು.

ನೆರೆದ ಭಕ್ತಾಧಿಗಳು ಸಾಮೂಹಿಕ ರಾಮನಾಮ ಸ್ಮರಣೆ, ಸಾಮೂಹಿಕ ಭಜನೆಯಲ್ಲಿ ಪಾಲ್ಗೊಂಡರು. ಇದೆ ಸಂದರ್ಭದಲ್ಲಿ ಜಯರಾಮ ದಂಪತಿಗಳು ಪೂಜ್ಯ ಎಡನೀರು ಶ್ರೀಗಳ ಪಾದಪೂಜಾ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲಿ ನೆರವೆರಿಸಿದ್ದರು. ರಾಮತಾರಕ ಮಂತ್ರ ಜಪ ಹೋಮವನ್ನು ಶ್ರೀವತ್ಸ್ಯ ಕೆದಿಲಾಯ ಮತ್ತು ತಂಡದವರು ನೆರೆವೆರಿಸಿದ್ದರು. ಭಾಗವಹಿಸಿದ ಭಕ್ತಾದಿಗಳನ್ನು ಶ್ರೀಮತಿ ಪ್ರೀತಿಕಾ ಯಶಸ್ ಇವರು ಸ್ವಾಗತಿಸಿ, ವಂದಿಸಿದರು.

 

 

—ಜಾಹೀರಾತು—

Leave a Reply

error: Content is protected !!